ಕುಶಾಲನಗರ, ಜ. ೨೭: ಸೋಮವಾರಪೇಟೆ ತಾಲೂಕಿನ ೪೦ ಗ್ರಾಮಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಕಾರ್ಯಕ್ರಮ ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆಯಿತು.ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಮ್ಮುಖದಲ್ಲಿ ಮೀಸಲು ನಿಗದಿಪಡಿಸಲಾಯಿತು. ಆಯಾ ಪಂಚಾಯ್ತಿಗಳಿಗೆ ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಗೊಂಡಿದ್ದ ಮೀಸಲಾತಿ ಗಳ ಪಟ್ಟಿಯನ್ನು ಜನಪ್ರತಿನಿದಿ üಗಳಿಗೆ ಪ್ರದರ್ಶಿಸಿ ಮಾಹಿತಿ ನೀಡಲಾಯಿತು.ಈ ಪಟ್ಟಿಯ ಅಂಕಿಅAಶದ ಅನ್ವಯ ಈ ಸಾಲಿನ ಮೀಸಲಾತಿ ನಿಗದಿ ಪಡಿಸಲಾಯಿತು. ಕೆಲವು ಗ್ರಾಪಂಗಳಿಗೆ ಮೀಸಲಾತಿ ನೇರವಾಗಿ ನಿಗದಿಗೊಂಡರೆ ಮತ್ತೆ (ಮೊದಲ ಪುಟದಿಂದ) ಹಲವು ಗ್ರಾಪಂಗಳಿಗೆ ಲಾಟರಿ ಮೂಲಕ ಮೀಸಲಾತಿ ಆಯ್ಕೆಗೊಳಿಸಲಾಯಿತು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ಚುನಾವಣಾ ಸಿಬ್ಬಂದಿಗಳಾದ ಪ್ರಕಾಶ್, ಅನಿಲ್ ಮತ್ತಿತರರು ಇದ್ದರು.