ವೀರಾಜಪೇಟೆ, ಜ. ೨೭: ರಸ್ತೆ ಬೇಕು ಎನ್ನುವವರು ರಸ್ತೆಗೆ ಬೇಕಾದ ಅಗತ್ಯ ಜಾಗವನ್ನು ಬಿಟ್ಟು ಸಹಕಾರ ನೀಡಿ. ಸರಕಾರದ ನಿಯಮಗಳನ್ನು ಪಾಲಿಸಿ ಗ್ರಾಮಕ್ಕೆ ಬರುವ ಅನುದಾನ ವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಸಹಕರಿಸಿ ಎಂದು ಶಾಸಕ ಕೆ ಜಿ ಬೋಪಯ್ಯ ಹೇಳಿದರು.

ಕಡಂಗಮೂರೂರು ಗ್ರಾಮದ ಕಾಂಗೀರ ಐನ್ ಮನೆಗೆ ೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಗಳಲ್ಲಿ ಬಹುತೇಕ ರಸ್ತೆಗಳು ಕಿರಿದಾಗಿದ್ದು ತೋಟ ಮಾಲೀಕರು ರಸ್ತೆಗೆ ಅನುಗುಣವಾದ ಜಾಗವನ್ನು ನೀಡಿದರೆ ಗ್ರಾಮದ ಅಭಿವೃದ್ದಿ ಸಾಧ್ಯವಾಗುತ್ತದೆ. ಕಡಂಗಮೂರೂರು ದವಸ ಭಂಡಾರ ತಡೆಗೋಡೆ ನಿರ್ಮಾಣಕ್ಕೆ ೩ ಲಕ್ಷ ರೂ. ಒದಗಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಮಹೇಶ್ ಗಣಪತಿ ಮಾತನಾಡಿ ರಸ್ತೆ ಬದಿಗಳಲ್ಲಿ ಚರಂಡಿ ಇಲ್ಲದ ಕಾರಣ ಗ್ರಾಮದಲ್ಲಿ ರಸ್ತೆಗಳು ಹಾಳಾಗಲು ಮುಖ್ಯ ಕಾರಣವಾಗಿದೆ. ಅಭಿವೃದ್ಧಿ ಕಾವiಗಾರಿಗಳಿಗೆ ಗ್ರಾಮಸ್ಥರÀ ಸಹಕಾರ ಅಗತ್ಯ ಎಂದು ಹೇಳಿದರು.

ಇದೇ ಸಂದರ್ಭ ಕಾಕೋಟು ಪರಂಬು ಗ್ರಾ.ಪಂ. ಸದಸ್ಯ ಚೋಳಂಡ ಸುಗುಣ, ಜಿ.ಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹಾದೇವ ತಿರಿಕೆಮೊಟ್ಟೆ ಈಶ್ವರ ದೇವಾಲಯದ ಅಧ್ಯಕ್ಷ ಕಾಂಗೀರ ಮಾಚಯ್ಯ ಮತ್ತಿತರರು ಉಪಸ್ಥಿತರಿದ್ದರು.