ಕುಶಾಲನಗರ, ಜ. ೨೭: ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ ಮಾವುತನ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.ತೀವ್ರ ಗಾಯಗೊಂಡ ಮಾವುತ ವಿಜಯ್ (೩೯) ಅವರನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಶಿಬಿರದ (ಮೊದಲ ಪುಟದಿಂದ) ಆನೆಮರಿ ಒಂದು ವರ್ಷ ಪ್ರಾಯದ ಪಾರ್ಥನಿಗೆ ಸಂಜೆ ಆಹಾರ ನೀಡುವ ಸಂದರ್ಭದಲ್ಲಿ ಕಾಲಿನಿಂದ ಮಾವುತನಿಗೆ ಒದ್ದಿದೆ. ಮಾವುತ ವಿಜಯ್‌ನ ಎಡಗೈ ಮೂಳೆ ಮುರಿದಿದ್ದು, ಕೆಲವು ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಮತ್ತು ಕಾರ್ಮಿಕರು ಗಾಯಾಳುವನ್ನು ತಕ್ಷಣ ಕುಶಾಲನಗರ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.