ಮಡಿಕೇರಿ, ಜ. ೨೮: ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರಪೇಟೆ ತಾಲೂಕು ಬಳಗುಂದ ಸ.ಹಿ.ಪ್ರಾ. ಶಾಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಕೊಡಗು ಜಿಲ್ಲಾ ಸಶಸ್ತç ದಳದ ಆರ್.ಪಿ.ಐ.ಎಸ್. ರಾಚಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಶಸ್ತಾçಗಾರ ವಿಭಾಗದ ಎ.ಆರ್.ಎಸ್.ಐ. ವೆಂಕಪ್ಪ, ಸಿಬ್ಬಂದಿಗಳಾದ ಬಿ.ಬಿ. ಜಗದೀಶ್ ಮತ್ತು ಎಂ.ಡಿ. ಅಭಿನ್ ಆರು ದಿನಗಳ ಕಾಲ ಆಸಕ್ತ ನಾಗರಿಕರಿಗೆ ಬಂದೂಕು ತರಬೇತಿಯನ್ನು ನೀಡಿದರು.

ತರಬೇತಿ ಶಿಬಿರದಲ್ಲಿ ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡು ಬಂದೂಕುಗಳ ಮಾಹಿತಿ ಹಾಗೂ ಉಪಯೋಗಿಸುವ ಬಗ್ಗೆ ತರಬೇತಿಯನ್ನು ಪಡೆದರು.

ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಪಾಲ್ಗೊಂಡು ತರಬೇತಿ ಪೂರೈಸಿದವರಿಗೆ ಪ್ರಮಾಣ ಪತ್ರ ವಿತರಿಸಿದರು.

ಮಡಿಕೇರಿ ಉಪವಿಭಾಗ ಡಿವೈಎಸ್‌ಪಿ ದಿನೇಶ್ ಕುಮಾರ್, ಆರ್.ಪಿ.ಐ. ರಾಚಯ್ಯ ಹಾಗೂ ಇತರ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರು ಪಾಲ್ಗೊಂಡಿದ್ದರು.