ಮಡಿಕೇರಿ, ಜ. ೨೮: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿಯ ರಾಷ್ಟಿçÃಯ ಸೇವಾ ಯೋಜನಾ ಘಟಕ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಮತ್ತು ಯುವಜನ ಸೇವಾ ಇಲಾಖೆಯ ಯುವಸ್ಪಂದನ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಚಿತ್ರಾ ವೈ ವಹಿಸಿದ್ದರು.
ಕಾರ್ಯಕ್ರಮದ ಉದ್ದೇಶದ ಬಗ್ಗೆ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾಧಿಕಾರಿ ಡಾ. ದಯಾನಂದ ಕೆ.ಸಿ. ಅವರು ವಿವರಿಸಿದರು. ಕೊಡಗು ಜಿಲ್ಲಾ ಯುವ ಸ್ಪಂದನದ ಕ್ಷೇತ್ರ ಸಂಪರ್ಕ ಅಧಿಕಾರಿ ವೆಂಕೋಬ ಅವರು ಜೀವನ ಕೌಶ್ಯಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕೊಡಗು ಜಿಲ್ಲಾ ಯುವ ಪರಿವರ್ತಕರಾದ ಮಾಲಾ ವಿ.ಎಸ್. ಯುವ ಸ್ಪಂದನದ ವಿವಿಧ ಸಲಲತ್ತುಗಳನ್ನು ವಿವರಿಸಿದರು. ಕರ‍್ಯಕ್ರಮದಲ್ಲಿ ಯುವಸ್ಪಂದನ ವಿಭಾಗದ ಹರ್ಷಿತಾ, ಅರುಣ್ ಹಾಗೂ ಕಾಲೇÃಜಿನ ಎಲ್ಲಾ ಬೋಧಕ, ಬೋಧಕೇತರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.