ಕೃಷಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ಪಶ್ಚಿಮ ಬಂಗಾಳ
ಕೋಲ್ಕತಾ, ಜ. ೨೮: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ. ಇಂದು ಸಂಸದೀಯ ವ್ಯವಹಾರಗಳ ಸಚಿವ ಪಾರ್ಥಾ ಚಟರ್ಜಿ ಅವರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವAತೆ ಒತ್ತಾಯಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು. ಅಲ್ಲದೆ ಮೂರು ನೂತನ ಕೃಷಿ ಕಾನೂನಗಳು ರೈತ ವಿರೋಧಿಯಾಗಿದ್ದು ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ಆರೋಪಿಸಿದರು. ಇನ್ನು ನಿರ್ಣಯದ ಕುರಿತು ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಂದ್ರ ಸರ್ಕಾರ ಕೂಡಲೇ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಬೇಕು ಎಂದು ಒತ್ತಾಯಿಸಿದರು. ಸಿಪಿಐ(ಎಂ) ಮತ್ತು ಕಾಂಗ್ರೆಸ್ ಈ ನಿರ್ಣಯವನ್ನು ಬೆಂಬಲಿಸಿದವು. ಆದರೆ ಕೆಲವು ವರ್ಷಗಳ ಹಿಂದೆ ಅಂಗೀಕರಿಸಿದ ಇದೇ ರೀತಿಯ ಕಾನೂನುಗಳನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಳ್ಳಬೇಕೆAದು ಒತ್ತಾಯಿಸಿದರು.
ಎನ್‌ಸಿಸಿ ಕೆಡೆಟ್‌ಗಳು ಗಡಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ
ನವದೆಹಲಿ, ಜ. ೨೮: ಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ತರಬೇತಿ ಪಡೆಯುತ್ತಿರುವ ಒಂದು ಲಕ್ಷ ರಾಷ್ಟಿçÃಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಕೆಡೆಟ್‌ಗಳು ಕರಾವಳಿ ಮತ್ತು ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂದು ದೆಹಲಿಯ ಫೀ.ಮಾ. ಕಾರ್ಯಪ್ಪ ಮೈದಾನದಲ್ಲಿ ಎನ್‌ಸಿಸಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಳೆದ ವರ್ಷ ಆಗಸ್ಟ್ ೧೫ ರಂದು ಕರಾವಳಿ ಮತ್ತು ಗಡಿ ಪ್ರದೇಶಗಳ ಸುಮಾರು ೧೭೫ ಜಿಲ್ಲೆಗಳಲ್ಲಿ ಎನ್‌ಸಿಸಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಅದರಂತೆ ಈಗ ಸುಮಾರು ೧ ಲಕ್ಷ ಎನ್‌ಸಿಸಿ ಕೆಡೆಟ್‌ಗಳಿಗೆ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯಿಂದ ತರಬೇತಿ ನೀಡಲಾಗುತ್ತಿದೆ. ಈ ಪೈಕಿ ಮೂರನೇ ಒಂದು ಭಾಗ ಮಹಿಳಾ ಕೆಡೆಟ್‌ಗಳಿದ್ದಾರೆ ಎಂದು ತಿಳಿಸಿದರು. ಕೋವಿಡ್ ಸಾಂಕ್ರಾಮಿಕದ ಮಧ್ಯೆ ಸರ್ಕಾರಕ್ಕೆ ಸಹಾಯ ಮಾಡಿದ್ದಕ್ಕಾಗಿ ಎನ್‌ಸಿಸಿ ಕೆಡೆಟ್‌ಗಳನ್ನು ಅಭಿನಂದಿಸಿದ ಪ್ರಧಾನಿ, ಎನ್‌ಸಿಸಿ ಕೆಡೆಟ್‌ಗಳು ಕಳೆದ ವರ್ಷ ಈ ದೇಶದ ಜನರಿಗೆ ಸಹಾಯ ಮಾಡಿದರು. ಅದರಂತೆ ಪ್ರವಾಹ ಅಥವಾ ಇನ್ನಾವುದೇ ವಿಪತ್ತಿನ ಸಂದರ್ಭದಲ್ಲೂ ನೆರವಿಗೆ ಸಿದ್ಧರಾಗಿ ಎಂದು ಕರೆ ನೀಡಿದರು. ಈ ಸಂದರ್ಭ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂರು ಸೇನಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ವಿಶ್ವನಾಥ್ ಸಚಿವ ಸ್ಥಾನ ಕನಸು ನುಚ್ಚುನೂರು
ಬೆಂಗಳೂರು, ಜ. ೨೮: ಸಚಿವ ಸ್ಥಾನಕ್ಕೆ ಅನರ್ಹ ಎಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿ ನಾಯಕ ಹೆಚ್. ವಿಶ್ವನಾಥ್‌ಗೆ ಮುಖಭಂಗವಾಗಿದೆ. ಎಂಎಲ್‌ಸಿ ಹೆಚ್. ವಿಶ್ವನಾಥ್ ವಿರುದ್ಧ ಹೈಕೋರ್ಟ್ ನೀಡಿದ್ದ ಅನರ್ಹತೆ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ನಾಮ ನಿರ್ದೇಶನದ ಆಧಾರದಲ್ಲಿ ವಿಶ್ವನಾಥ್‌ಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬುದನ್ನು ಪುನರುಚ್ಚರಿಸಿದೆ. ವಿಶ್ವನಾಥ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರಿಂ ಕೋರ್ಟ್, ಅವರು ಸಚಿವರಾಗಬೇಕೆಂದು ಕಾಣುತ್ತಿದ್ದ ಕನಸಿಗೆ ತಣ್ಣೀರೆರಚಿದೆ. ಸುಪ್ರೀಂ ಕೋರ್ಟ್ನಲ್ಲಿ ತಮ್ಮ ಅರ್ಜಿ ವಜಾಗೊಂಡ ಹಿನ್ನೆಲೆ ವಿಧಾನಸೌಧದಲ್ಲಿ ಎಂಎಲ್‌ಸಿ ಹೆಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ, ವಕೀಲರ ಜೊತೆ ಚರ್ಚಿಸಿ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧರಿಸುತ್ತೇನೆ, ನಾಮ ನಿರ್ದೇಶಿತ ಸದಸ್ಯನಾಗಿದ್ದರಿಂದ ಸಮಸ್ಯೆಯಾಗಿದೆ, ಇಲ್ಲಿ ಯಾರೂ ಕೂಡ ಏಕಾಂಗಿಯಲ್ಲ, ನಾನು ಸದ್ಯ ಎಂಎಲ್‌ಸಿಯಾಗಿಯೇ ಮುಂದುವರಿಯುತ್ತೇನೆ ಎಂದು ಹೇಳಿದ್ದಾರೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಬೆಳಗಾವಿ, ಜ. ೨೮: ಒಂದೇ ಕುಟುಂಬದ ನಾಲ್ವರು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ತಾ. ೨೭ ರ ತಡರಾತ್ರಿ ಜಿಲ್ಲೆಯ ರಾಯಬಾಗ ಬಳಿ ನಡೆದಿದೆ. ಸಾತಪ್ಪ ಅಣ್ಣಪ್ಪ ಸುತಾರ (೬೦), ಪತ್ನಿ ಮಹಾದೇವಿ ಸಾತಪ್ಪ ಸುತಾರ (೫೦) ಹಾಗೂ ಮಕ್ಕಳಾದ ಸಂತೋಷ ಸಾತಪ್ಪ ಸುತಾರ (೨೬), ದತ್ತಾತ್ರೇಯ ಸಾತಪ್ಪ ಸುತಾರ (೨೮) ಆತ್ಮಹತ್ಯೆ ಮಾಡಿಕೊಂಡವರು. ಮೃತರನ್ನು ಭಿರಡಿ ಗ್ರಾಮದವರು ಎಂದು ಗುರುತಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಮ ಮಂದಿರ ಸ್ತಬ್ಧಚಿತ್ರ ಪ್ರಥಮ
ನವದೆಹಲಿ, ಜ. ೨೮: ಗಣರಾಜ್ಯೋತ್ಸವ ದಿನದಂದು ದೆಹಲಿಯ ರಾಜಪಥದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಪ್ರಾಚೀನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ರಾಮ ಮಂದಿರ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಮುಂದೆ ರಾಮಾಯಣ ಕರ್ತೃ ಮಹರ್ಷಿ ವಾಲ್ಮೀಕಿ ಕುಳಿತಿರುವ ಟ್ಯಾಬ್ಲೋ ದೇಶದ ಜನತೆಯ ಗಮನ ಸೆಳೆದಿತ್ತು. ಜನರು ಜೈ ಶ್ರೀ ರಾಮ್ ಘೋಷಣೆ ಕೂಗಿ, ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಇದೀಗ ರಾಮ ಮಂದಿರ ಮಾದರಿ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಮಾಹಿತಿ ನಿರ್ದೇಶಕ ಶಿಶಿರ್ ಸಿಂಗ್, ಇಡೀ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು. ದೆಹಲಿಯಲ್ಲಿ ರಕ್ಷಣಾ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಂಗೂಲಿಗೆ ಆ್ಯಂಜಿಯೋಪ್ಲಾಸ್ಟಿ ಯಶಸ್ವಿ
ನವದೆಹಲಿ, ಜ. ೨೮: ಮಾಜಿ ಟೀಮ್ ಇಂಡಿಯಾ ನಾಯಕ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಲ್ಕತ್ತಾದ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಸೌರವ್ ಗಂಗೂಲಿಗೆ ಎರಡನೇ ಆ್ಯಂಜಿಯೋಪ್ಲಾಸ್ಟಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಎರಡನೇ ಹಂತದ ಆ್ಯಂಜೊಯೋಪ್ಲಾಸ್ಟಿಯಲ್ಲಿ ಸೌರವ್ ಗಂಗೂಲಿಗೆ ಎರಡು ಸ್ಟಂಟ್‌ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಸೌರವ್ ಗಂಗೂಲಿಯ ಆಪ್ತರು ಮಾಹಿತಿ ನೀಡಿದ್ದು ಶಸ್ತçಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂಬ ಮಾಹಿತಿ ನೀಡಿದ್ದಾರೆ. ಸೌರವ್ ಗಂಗೂಲಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೌರವ್ ಗಂಗೂಲಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗಂಗೂಲಿಯ ಭೇಟಿಯ ಬಳಿಕ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ "ಗಂಗೂಲಿ ಎಚ್ಚರದಿಂದಿದ್ದು ಮಾತನಾಡುತ್ತಿದ್ದಾರೆ" ಎಂದಿದ್ದಾರೆ. ಶಸ್ತçಚಿಕಿತ್ಸೆ ಯಶಸ್ವಿಯಾಗಿದೆ. ನಾನು ಅವರೊಂದಿಗೆ (ಸೌರವ್ ಗಂಗೂಲಿ) ಹಾಗೂ ಅವರ ಪತ್ನಿಯೊಂದಿಗೆ ಮಾತನಾಡಿದ್ದೇನೆ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದರು. ಜನವರಿ ತಿಂಗಳ ಆರಂಭದಲ್ಲಿ ಸೌರವ್ ಗಂಗೂಲಿ ತಮ್ಮ ನಿವಾಸದ ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ವೇಳೆ ಲಘು ಹೃದಯಾಘಾತವಾಗಿತ್ತು. ಬಳಿಕ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಪ್ಲಾಸ್ಟಿ ನಡೆಸಲಾಗಿತ್ತು. ಮತ್ತೆರಡು ಎರಡು ರಕ್ತನಾಳಗಳಲ್ಲಿ ದೋಷವಿರುವುದನ್ನು ಗುರುತಿಸಿದ್ದ ವೈದ್ಯಾಧಿಕಾರಿಗಳು ಕೆಲ ದಿನಗಳ ವಿಶ್ರಾಂತಿಯ ನಂತರ ಆ್ಯಂಜಿಯೋಪ್ಲಾಸ್ಟಿ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದರು.