ಮಡಿಕೇರಿ, ಜ. ೨೮: ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶದೊಂದಿಗೆ ಕಾವೇರಿ ಜಲಾನಯನ ಪ್ರದೇಶವೂ ಆಗಿದ್ದು, ಇಲ್ಲಿ ಅನಧಿಕೃತವಾಗಿ ಕಾಫಿ ತೋಟಗಳು, ಕೃಷಿ ಜಮೀನುಗಳು ಭೂ ಪರಿವರ್ತನೆಯಾಗುತ್ತದೆ, ಇದನ್ನು ತಡೆ ಹಿಡಿಯಬೇಕೆಂದು ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬAಧಿಸಿದAತೆ ನ್ಯಾಯಾಲಯ ದಿಂದ ಸರಕಾರಕ್ಕೆ ನೋಟೀಸ್ ಜಾರಿಗೊಳಿಸಲಾಗಿದೆ.
ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಮಾಜಿ ಅಧ್ಯಕ್ಷ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಸರಕಾರ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾರ್ಚ್ ೫ಕ್ಕೆ ಮುಂದೂಡಿದೆ. ಹೆಚ್ಚಾಗುತ್ತಿರುವ ನಗರೀಕರಣದ ತಡೆ ಹಾಗೂ ರೆಸಾರ್ಟ್, ನಿವೇಶನಗಳಿಗೆ ಕೃಷಿ ಜಮೀನುಗಳನ್ನು ಪರಭಾರೆ ಮಾಡದಂತೆ ಹಾಗೂ ಭೂ ಪರಿವರ್ತನೆಗೆ ಅವಕಾಶ ನೀಡದಂತೆ ಕೋರಿ ಮುತ್ತಣ್ಣ ಅವರು ವಕೀಲ ಬಿ.ಆರ್. ದೀಪಕ್ ಅವರ ಮೂಲಕ ಪಿ.ಐ.ಎಲ್. ಸಲ್ಲಿಸಿದ್ದಾರೆ. ಈಗಿನ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಹಲವಾರು ಅನಾಹುತಗಳು ಸಂಭವಿಸುತ್ತಿರುವುದನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.