ಮಡಿಕೇರಿ, ಜ. ೨೬: ಮಡಿಕೇರಿ ತಾಲೂಕು ಹೊಸ್ಕೇರಿ ಗ್ರಾ.ಪಂ. ವ್ಯಾಪ್ತಿಯ ಅರೆಕಾಡು ಗ್ರಾಮದಿಂದ ನೇತಾಜಿ ನಗರ ಉಪಗ್ರಾಮಕ್ಕೆ ಸಂಪರ್ಕ ಸಾರ್ವಜನಿಕ ರಸ್ತೆ ತುಂಬಾ ಹದಗೆಟ್ಟಿದ್ದು, ಇದನ್ನು ಸರಿಪಡಿಸಲು ಒತ್ತಾಯಿಸಿ ಇಂದು ಕೊಡವ ವೆಲ್ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸಾರ್ವನಿಕರು ಇಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಹೊಸ್ಕೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನ್ನಾರ್‌ಕಂಡ ಸೋಮಯ್ಯ, ತೊಂಡಿಯAಡ ನಾಣಯ್ಯ, ತೊಂಡಿಯAಡ ರಂಜಿ ತಮ್ಮಯ್ಯ, ನೆಲ್ಲಮಕ್ಕಡ ಪ್ರಕಾಶ್, ರವಿ, ಬೊಳಿಯಾಡಿರ ಅರುಣ, ಎಂ.ಎ. ಇಬ್ರಾಹಿಂ, ಎಂ.ಕೆ. ಸಲೀಂ ಹಾಜಿ ಮತ್ತು ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಕೆ. ಯೂಸೂಫ್ ಆಲಿ ಹಾಜರಿದ್ದರು.