ಸೋಮವಾರಪೇಟೆ,ಜ.೨೫: ತಾಲೂಕಿನ ೫ ಪರೀಕ್ಷಾ ಕೇಂದ್ರಗಳಲ್ಲಿ ಎನ್‌ಟಿಎಸ್‌ಸಿ ಹಾಗೂ ಎನ್‌ಎಂಎAಸ್ ಪರೀಕ್ಷೆ ಸುಗಮವಾಗಿ ನಡೆಯಿತು.
ಸೋಮವಾರಪೇಟೆ ಮತ್ತು ಕುಶಾಲನಗರ ಪದವಿ ಪೂರ್ವ ಕಾಲೇಜು, ಓಎಲ್‌ವಿ ಕಾನ್ವೆಂಟ್, ಸಂತ ಜೋಸೆಫರ ಪ್ರೌಢ ಶಾಲೆ ಹಾಗೂ ಕುಶಾಲನಗರದ ಫಾತಿಮಾ ಕಾನ್ವೆಂಟ್‌ನ ಪರೀಕ್ಷಾ ಕೇಂದ್ರದಲ್ಲಿ ೭೦೪ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
೮ನೇ ತರಗತಿಯ ಎನ್‌ಎಂಸಿ ಪರೀಕ್ಷೆಯನ್ನು ೩೯೫ ವಿದ್ಯಾರ್ಥಿಗಳು, ೧೦ನೇ ತರಗತಿಯ ಎನ್‌ಟಿಎಸ್‌ಸಿ ಪರೀಕ್ಷೆಯನ್ನು ೩೦೯ ವಿದ್ಯಾರ್ಥಿಗಳು ಬರೆದರು. ಕುಶಾಲನಗರ, ಸೋಮ ವಾರಪೇಟೆ ಸ.ಪ.ಪೂ.ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಬಿಇಒ ಪಾಂಡು ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷರಾದ ಸದಾಶಿವಯ್ಯ ಎಸ್. ಪಲ್ಲೇದ್ ಅವರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು. ಮುಖ್ಯ ಅಧೀಕ್ಷರಾದ ತಳವಾರ್ ಅವರು ಉಪಸ್ಥಿತರಿದ್ದರು.