ಮಡಿಕೇರಿ,ಜ.೨೫: ಮಡಿಕೇರಿ ನಗರದಲ್ಲಿ ತಲೆದೋರಿರುವ ಕಸ ವಿಲೇವಾರಿ ಜಾಗದ ಸಮಸ್ಯೆಗೆ ಸಂಬAಧಿಸಿದAತೆ ನೂತನ ಹಾಗೂ ಪರ್ಯಾಯ ಕಸವಿಲೇರಿ ಘಟಕ ಸ್ಥಾಪನೆ ಆಗುವವರೆಗೂ ಉಚ್ಚ ನ್ಯಾಯಾಲಯವೇ ನಿಗಾ ವಹಿಸಲಿದೆ ಎಂದು ನ್ಯಾಯಾಲಯ ಹೇಳಿದೆ.ಕಸ ವಿಲೇವಾರಿ ಸಮಸ್ಯೆಗೆ ಸಂಬAಧಿಸಿದAತೆ ನಗರದ ಎಸ್.ಆರ್.ವಿ.ಕೆ ಸಂಘ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತರಕ್ಷಣಾ ಅರ್ಜಿಗೆ ಸಂಬAಧಿಸಿದAತೆ ಕಳೆದ ಡಿಸೆಂಬರ್ ನಲ್ಲಿ ಮುಂದಿನ ನಾಲ್ಕು ವಾರಗಳಲ್ಲಿ ಜಾಗ ಅಂಗೀಕರಿಸುವAತೆ ನಗರಸಭೆ ಹಾಗೂ ಸರಕಾರಕ್ಕೆ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಗುರುತಿಸಲಾಗಿರುವ ಎರಡನೇ ಮೊಣ್ಣಂಗೇರಿಯಲ್ಲಿರುವ ಜಾಗದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ವೈಜ್ಞಾನಿಕವಾದ ಕಸವಿಲೇವಾರಿ ಘಟಕ ಸ್ಥಾಪನೆ ಮಾಡುವದಾಗಿ ನ್ಯಾಯಾಲಯಕ್ಕೆ ಅಫಿಡಾವಿಟ್ ಸಲ್ಲಿಸಿತ್ತು. ಈ ಸಂಬAಧ ವಿಚಾರಣೆಯನ್ನು ಇಂದು ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ನಗರಸಭೆಯಿಂದ ಇದುವರೆಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೇ ಇದ್ದುದರಿಂದ ಘಟಕ ಸ್ಥಾಪನೆ ಆಗುವವರೆಗೆ ನ್ಯಾಯಾಲಯವೇ ನೋಡಿಕೊಳ್ಳಲಿದೆ. ಮೂರು ವರ್ಷಗಳ ಗರಿಷ್ಠ ಕಾಲಮಿತಿ ಇರಲಿದ್ದು ಅದರೊಳಗಡೆ ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಹಿರಿಯ ನ್ಯಾಯಾಧೀಶರಾದ

(ಮೊದಲ ಪುಟದಿಂದ) ಅಭಯ್ ಶ್ರೀನಿವಾಸ್ ಒಕ ಹಾಗೂ ವಿಶ್ವಜಿತ್ ಶೆಟ್ಟಿ ಅವರುಗಳನ್ನೊಳಗೊಂಡ ಪೀಠ ತಾಕೀತು ಮಾಡಿದೆ. ಈ ಸಂಬAಧÀ ಕ್ರಿಯಾಯೋಜನೆ ತಯಾರಿಸಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿAದ ಪರವಾನಗಿ ಪಡೆದುಕೊಳ್ಳುವಂತೆ ನಗರಸಭೆಗೆ ಸೂಚಿಸಿದೆ. ಅಲ್ಲದೆ, ಯಾವ ಯಾವ ಹಂತಗಳಲ್ಲಿ ಯಾವ ರೀತಿಯ ಕೆಲಸ, ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ನಗರಸಭೆಗೆ ಮಾರ್ಗದರ್ಶನ ನೀಡುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರಾದ ಜೀವನ್ ನೇರಳಗಿ ಅವರಿಗೆ ಸೂಚನೆ ನೀಡಿದೆ.

ಕಸ ಸಮಸ್ಯೆ ಪರಿಹರಿಸದ ಬಗ್ಗೆ ನಗರಸಭೆ ವಿರುದ್ಧ ಮೊಕದ್ದಮೆ ಹೂಡಲು ಸೂಚಿಸಿದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರನ್ನು ಪ್ರಶ್ನಿಸಿದ ಸಂದರ್ಭ ಉತ್ತರಿಸಿದ ವಕೀಲರು, ಒಮ್ಮೆ ಮೊಕದ್ದಮೆ ಹೂಡಲಾಗಿತ್ತು, ಅದು ಮುಂದುವರಿಯಲಿಲ್ಲ, ಮತ್ತೊಮ್ಮೆ ಮೊಕದ್ದಮೆ ಹೂಡುವದಾಗಿ ಹೇಳಿದರು. ಈ ಸಂಬAಧ ಮುಂದಿನ ವಿಚಾರಣೆಯನ್ನು ಫೆ.೧೯ಕ್ಕೆ ಕಾಯ್ದಿರಿಸಲಾಗಿದೆ. ಎಸ್ ಆರ್ ವಿ ಕೆ ಸಂಘದ ಪರವಾಗಿ ವಕೀಲೆ ಅನು ಚಂಗಪ್ಪ ವಕಾಲತ್ತು ವಹಿಸಿದ್ದಾರೆ.