ಮಡಿಕೇರಿ, ಜ.೨೫: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ೧೨೨ ನೇ ಜನ್ಮ ಜಯಂತಿ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾವರ ವಿವರ ಇಂತಿದೆ.
ಸಾರ್ವಜನಿಕ ವಿಭಾಗ: ಕಡಗದಾಳು ಎಚ್.ಎಸ್.ಭಾರತಿ (ಪ್ರಥಮ), ಮಡಿಕೇರಿ ಹರೀಶ್ ಸರಳಾಯ(ದ್ವಿತೀಯ), ಗಿರೀಶ್ ಕಿಗ್ಗಾಲು(ತೃತೀಯ) ಬಹುಮಾನ ಪಡೆದಿದ್ದಾರೆ.
ಕಾಲೇಜು ವಿಭಾಗ ಪ್ರಥಮ ಎಂ.ಪಿ.ವಿAಧ್ಯಾ, ದ್ವಿತೀಯ-ರಚಲ್ ಸಿಲ್ವಿಸ್ಟರ್, ತೃತೀಯ-ಬಿ.ಎಸ್.ಶ್ರೀತೇಜ. ಪ್ರೌಢಶಾಲಾ ವಿಭಾಗ: ಪ್ರಥಮ-ಕಾರ್ತಿಕ್ ಟಿ.ಕೆ., ದ್ವಿತೀಯ-ರಾಶಿದ ಕೆ.ಎಂ.ಕಾAತೂರು ಗ್ರಾಮ, ತೃತೀಯ-ಧನುಶ್ ಎಸ್.ಕುಶಾಲನಗರ. ಬಹುಮಾನ ವಿಜೇತರಿಗೆ ಜನವರಿ ೨೮ ರಂದು ಮಡಿಕೇರಿಯಲ್ಲಿ ಆಯೋಜಿತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜನ್ಮದಿನಾಚರಣೆ ಸಂದರ್ಭ ಬಹುಮಾನ ನೀಡಲಾಗುತ್ತದೆ. ಪಾಲ್ಗೊಂಡ ಸ್ಪರ್ಧಾರ್ಥಿಗಳಿಗೆಲ್ಲರಿಗೂ ಪ್ರಶಂಸನಾ ಪತ್ರವನ್ನು ಅಂದು ನೀಡಲಾಗುತ್ತದೆ. ಸ್ಪರ್ಧಾರ್ಥಿಗಳು ಜ.೨೮ ರಂದು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಕೆ.ದರ್ಶನ್ ಅವರು ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆಯ ತೀರ್ಪು ಗಾರರಾಗಿ ಉಪನ್ಯಾಸಕರುಗಳಾದ ಪ್ರೇಮಲತಾ, ರವೀಶ್, ಕುರ್ಶಿದಾ, ಕೆ.ಜಯಲಕ್ಷ್ಮಿ ಮತ್ತು ಗಾಯತ್ರಿ ಕಾರ್ಯನಿರ್ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ