ಮಡಿಕೇರಿ, ಜ. ೨೩ : ನಗರ ಠಾಣಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ದಾಸ್ತಾನು ಮಾಡಿದ್ದ ೨೩೦ ಕಬ್ಬಿಣದ ಶೀಟ್‌ಗಳನ್ನು ಕಳವು ಮಾಡಿದ್ದ ನಾಲ್ವರನ್ನು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜರಾಜೇಶ್ವರಿ ನಗರದ ಮಿಕ್ ತ್ವಾದ್ (೨೪), ಎಂ.ಯು ಖಾದರ್ (೨೪), ಪವನ್ ಸಿ.ಟಿ (೨೫), ಜುಲ್ಫಿಕರ್ (೨೪) ಬಂಧಿತ ಆರೋಪಿಗಳು. ಆರೋಪಿತರಿಂದ ರೂ ೧.೬೧ ಲಕ್ಷ ಮೌಲ್ಯದ ೨೩೦ ಕಬ್ಬಿಣದ ಶೀಟ್, ೨ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ನಿರ್ದೇಶನದಂತೆ ಡಿವೈಎಸ್ಪಿ ದಿನೇಶ್ ಮಾರ್ಗದರ್ಶನ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಎಸ್ ಐ ಅಂತಿಮ, ಎಎಸ್‌ಐ ರಾಜು, ಅಪರಾಧ ಪತ್ತೆ ದಳದ ಕೆ.ಕೆ ದಿನೇಶ್, ಶ್ರೀನಿವಾಸ್, ಪ್ರವೀಣ್, ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್, ಸುನಿಲ್, ಧರ್ಮ, ಮನು, ದಿವ್ಯ, ಓಮನ, ಭವಾನಿ, ರಾಜೇಶ್ ಮತ್ತು ಗಿರೀಶ್ ಇದ್ದರು.