ಮಡಿಕೇರಿ, ಜ.೨೩ : ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಕೊಡಗಿನ ಸೇನಾ ದಿಗ್ಗಜರಲ್ಲಿ ಒಬ್ಬರಾಗಿದ್ದು, ಅವರ ಉತ್ತುಂಗ ದೇಶ ಸೇವೆ, ಸೇನಾ ಶೌರ್ಯದ ಅವಿಸ್ಮರಣೀಯ ಸಾಧನೆ ವಿಶ್ವದಾದ್ಯಂತ ಜನಜನಿತವಾಗಿದೆ. ಅಲ್ಲದೆ, ಅವರÀ ಬದುಕು ಅನೇಕರಿಗೆ ಸ್ಫ್ಪೂರ್ತಿದಾಯಕವಾಗಿದೆ. ಜನರಲ್ ಕೆ.ಎಸ್. ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹೆಸರು ಕೊಡಗಿನಾದ್ಯಂತ ಮನೆಮಾತಾಗಿದ್ದರೂ ಅವರ ಜೀವನ ಚರಿತ್ರೆ ಹಾಗೂ ಅವರ ಅಗಣಿತÀ ಸಾಧನೆಗಳ ಬಗ್ಗೆ ನಮ್ಮಲ್ಲಿ ಹಲವರಿಗೆ ಸಂಪೂರ್ಣವಾಗಿ ತಿಳಿದಿಲ್ಲ. ಆದರೆ, ಇನ್ನು ಕೆಲವೇ ದಿನಗಳಲ್ಲಿ ರಾಷ್ಟçಪತಿ ರಾಮನಾಥ್ ಕೋವಿಂದ್ ಅವರಿಂದ ಅನಾವರಣಗೊಳ್ಳಲಿರುವ ಜನರಲ್ ತಿಮ್ಮಯ್ಯ ಸಂಗ್ರಹಾಲಯ, ಜನರಲ್ ತಿಮ್ಮಯ್ಯನವರ ಜೀವನವನ್ನು ವಿಶ್ವಕ್ಕೆ ತೆರೆದಿಡುತ್ತದೆಯಲ್ಲದೆ, ಅನೇಕರನ್ನು ನಿಸ್ಸಂದೇಹವಾಗಿ ಸೇನೆಯನ್ನು ಸೇರಲು ಪ್ರೇರೇಪಿಸುತ್ತದೆ. ಸಮವಸ್ತçಧಾರಿ ಸ್ವಾಗತ ಇದೀಗ ನವೀಕರಣಗೊಂಡು ವೈವಿಧ್ಯಮಯ ಕಲಾತ್ಮಕ, ಶೂರತನ ಪ್ರೇರಕÀ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಸ್ತ್ತು, ವಿನ್ಯಾಸಗಳಿಂದÀ ರಾರಾಜಿಸುತ್ತಿರುವ ಜನರಲ್ ತಿಮ್ಮಯ್ಯ ಅವರ ನಿವಾಸವನ್ನು (ಸನ್ನಿಸೈಡ್) ಪ್ರವೇಶಿಸುತ್ತಿದ್ದಂತೆಯೇ, ಜನರಲ್ ತಿಮ್ಮಯ್ಯ ಅವರ ಸಮವಸ್ತçಧಾರಿ ಪ್ರತಿಮೆ ಸರ್ವರನ್ನೂ ಸ್ವಾಗತಿಸುತ್ತದೆ. ಸಂಗ್ರಹಾಲಯಕ್ಕೆ ಆಗಮಿಸಿದವರಿಗೆ ಸಂಗ್ರಹಾಲಯದ ಸಂಪೂರ್ಣ ಮಾಹಿತಿಯನ್ನು ಧ್ವನಿ ರೆಕಾರ್ಡಿಂಗ್ ಮುಖೇನ ನೀಡಲಾಗುತ್ತದೆ. ಈ ರೆಕಾರ್ಡಿಂಗ್ ಜನರಲ್ ತಿಮ್ಮಯ್ಯನವರ ಧ್ವನಿಯನ್ನು ಹೋಲುವ ರೀತಿ ಇರಲಿದ್ದು ಅವರೇ ನಿರೂಪಣೆ ಮಾಡಿದಂತೆ ಅನಿಸುತ್ತದೆ.

ತಿಮ್ಮಯ್ಯ ಅವರನ್ನು ಭೇಟಿಯಾಗಲು ಅಂದಿನ ಫೀಲ್ಡ್ ಮಾರ್ಷಲ್ ಕ್ಲೌಡ್ ಜಾನ್‌ಐರ್ ಆಚಿನ್ಲೆಕ್ ಸನ್ನಿಸೈಡ್‌ಗೆ ಆಗಮಿಸಿದ್ದರು. ಈ ಭೇಟಿಯ ಆ ರೋಮಾಂಚಕ ಕ್ಷಣ ಸಂಗ್ರಹಾಲಯದ ಮೊದಲ ಕೋಣೆಯಲ್ಲಿರುವ ಕಲಾಚಿತ್ರದ ಮೂಲಕ ಮೂಡಿಬಂದಿದೆ. ಇದು ತಿಮ್ಮಯ್ಯನವರ ಹಿರಿಮೆಗೆ ಸಾಕ್ಷಿಯಾಗಿದೆ. ಅದೇ ಕೋಣೆಯಲ್ಲಿ ಜನರಲ್ ತಿಮ್ಮಯ್ಯ ಅವರು ತಮ್ಮ ಲ್ಯಾಂಬ್ರೆಟ್ಟಾ ಕಾರಿನಲ್ಲಿ ಕಛೇರಿಗೆ ಹೊರಟಿದ್ದ ಚಿತ್ರವೂ ಪ್ರದರ್ಶನಗೊಂಡಿದೆ.

‘ರೂಟ್ಸ್’

ಚಿತ್ರ ವೀಕ್ಷಿಸುತ್ತಾ ಮುಂದೆ ಸಾಗಿದರೆ ‘ಖooಣs’

(ಮೊದಲ ಪುಟದಿಂದ) (ಬೇರುಗಳು) ಎಂಬ ಹೆಸರಿನ ಕೋಣೆ ಜನರಲ್ ತಿಮ್ಮಯ್ಯನವರ ಜೀವನದಲ್ಲಿ ಕೊಡಗಿನ ಪಾತ್ರದ ಪ್ರಾಮುಖ್ಯತೆಯನ್ನು ಬಿಂಬಿಸಿದೆ. ಕೊಡಗಿನ ಜನಪ್ರಿಯ ತಾಣಗಳಲ್ಲಿ ತೆಗೆದ ಜನರಲ್ ಅವರ ಆಸಕ್ತಿದಾಯಕ ಚಿತ್ರಗಳು ತಿಮ್ಮಯ್ಯನವರ ಕೊಡಗಿನ ನಂಟನ್ನು ತೆರೆÀದಿಡುತ್ತದೆ. ಅಲ್ಲದೆ, ಈ ಕೋಣೆಯು ನಮ್ಮ ಜಿಲ್ಲೆಯ ವಿಶಿಷ್ಟ ಸಂಸ್ಕೃತಿಯನ್ನು ಇಲ್ಲಿಗೆ ಆಗಮಿಸುವ ಪ್ರವಾಸಿಗರೂ ಸೇರಿದಂತೆ ಸ್ಥಳೀಯರಿಗೂ ತೆರೆದಿಡುತ್ತದೆ.

ತಿಮ್ಮಯ್ಯನವರ ಕುಟುಂಬ: ವಸ್ತುಸಂಗ್ರಹಾಲಯವು ಜನರಲ್ ತಿಮ್ಮಯ್ಯ ಅವರ ಕುಟುಂಬದ ಸದಸ್ಯರ ಸಾಧನೆಯನ್ನು ವಿಶಿಷ್ಟ ರೀತಿಯಲ್ಲಿ ಪ್ರಚುರಗೊಳಿಸುತ್ತದೆ. ಕುಟುಂಬದ ಪುರುಷರ ಸಾಧನೆಗಳನ್ನು ತಿಳಿದುಕೊಳ್ಳುವುದರೊಂದಿಗೆ ತಿಮ್ಮಯ್ಯ ಅವರ ಒಡಹುಟ್ಟಿದವರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಚಿತ್ರಣವನ್ನು ಇಲ್ಲಿ ಬಿಂಬಿಸಲಾಗಿದ್ದು ಕೊಡಗಿನ ಜನರ ಸೇನಾ ಪ್ರೇಮ ಇಲ್ಲಿ ವ್ಯಕ್ತವಾಗಿದೆ. ‘ಸನ್ನಿ ಸೈಡ್’ನ ಮಹಿಳೆಯರೂ ಕೂಡ ಪುರುಷರಿಗೆ ಸಮಾನ ಎಂಬುದನ್ನು ಅಲ್ಲಿಯ ಮಹಿಳೆಯರಿಗೆ ಸಮರ್ಪಿಸಿರುವ ಕೋಣೆ ಅರ್ಥಪೂರ್ಣವಾಗಿ ತೋರಿಸುತ್ತದೆ.

ಪತ್ನಿಗೆ ಪ್ರತ್ಯೇಕ ಕೋಣೆ

ಜನರಲ್ ತಿಮ್ಮಯ್ಯ ಅವರ ಪತ್ನಿ ನೀನಾ ಅವರ ಸಾಧನೆಗಳನ್ನು ಸರ್ವರಿಗೂ ಪರಿಚಯಿಸಲು ಒಂದು ಕೋಣೆಯನ್ನು ಮೀಸಲಿಡಲಾಗಿದ್ದು, ನೀನಾ ಅವರ ಸಾಮಾಜ ಸೇವೆಗಳ ಹಾಗೂ ಅವರಿಗೆ ದೊರೆತ ಕೈಸರ್-ಎ-ಹಿಂದ್ ಪ್ರಶಸ್ತಿಯ ಬಗ್ಗೆ ಕೋಣೆಯಲ್ಲಿ ವಿವರವಾಗಿ ಮಾಹಿತಿ ನೀಡಲಾಗಿದೆ.

ಬಾಲ್ಯದÀ ಜೀವನ ಮತ್ತು ಜನರಲ್ ತಿಮ್ಮಯ್ಯ ಅವರು ಮಿಲಿಟರಿಗೆ ಕಾಲಿಡುವ ಕಥೆಗಳನ್ನು ‘ಸನ್ನಿಸೈಡ್’ನಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

ಗಮನ ಸೆಳೆಯುವ ಶಸ್ತಾçಸ್ತçಗಳು: ಈ ಹಿಂದೆ ಬಳಕೆಯಾದ ಸೈನ್ಯದ ಶಸ್ತಾçಸ್ತçಗಳನ್ನು ಪ್ರದರ್ಶಿಸಲಾಗಿದ್ದು, ನೋಡಿದೊಡನೆಯೆ ವೀಕ್ಷಕರಲ್ಲಿ ರೋಮಾಂಚಕ ಭಾವನೆ ಸೃಷ್ಟಿಸುತ್ತದೆ “ಎಲ್ಲಾ ವಸ್ತು ಸಂಗ್ರಹಾಲಯಗಳಲ್ಲಿ ಯಾವುದೇ ವಸ್ತುವನ್ನು ಮುಟ್ಟಲು ಅವಕಾಶ ಕೊಡದೆ ಬರಿ ವೀಕ್ಷಣೆಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಆದರೆ ಇಲ್ಲಿನ ಶಸ್ತಾçಸ್ತçಗಳನ್ನು ಸ್ಪರ್ಶಿಸಲು ಮತ್ತು ಅದರ ಚಾಕಚಕ್ಯತೆಯನ್ನು ಕೈಯಲ್ಲಿ ಹಿಡಿದು ಅರಿತುಕೊಳ್ಳಲು ಸರ್ವರಿಗೆ ಅನುವು ಮಾಡಿಕೊಡಲಾಗುತ್ತದೆ. ಸಂಗ್ರಹಾಲಯಕ್ಕೆ ಆಗಮಿಸುವವರನ್ನು ಸೇನೆಗೆ ಸೇರುವಂತೆ ಪ್ರೇರೇಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ’’ ಎಂದು ಜನರಲ್ ತಿಮ್ಮಯ್ಯ ಮತ್ತು ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಫೋರಂನ ಸಂಚಾಲಕ ನಿವೃತ್ತ ಮೇಜರ್ ನಂದಾ ನಂಜಪ್ಪ ವಿವರಿಸಿದ್ದಾರೆ.

ರಾಷ್ಟçಕ್ಕೆ ಜನರಲ್ ನೀಡಿದ ಮಹತ್ತರ ಕೊಡುಗೆಗಳನ್ನು ವಿವಿಧ ಯುದ್ಧಗಳ ಛಾಯಾಚಿತ್ರಗಳು ನಿರೂಪಿಸುತ್ತವೆ. ‘ಯುನೈಟೆಡ್ ನೇಷನ್ ಪೀಸ್ ಕೀಪಿಂಗ್ ಫೋರ್ಸ್’ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಜನರಲ್ ತಿಮ್ಮಯ್ಯ ಅವರು ಜಗತ್ತಿಗೆ ನೀಡಿದ ಕೊಡುಗೆ ಶ್ಲಾಘನೀಯ ಹಾಗೂ ಇದನ್ನು ಸಂಗ್ರಹಾಲ ಯದಲ್ಲಿ sಸಮಗ್ರವಾಗಿ ವಿವರಿಸಲಾಗಿದೆ. ಇದಲ್ಲದೆ, ೧೯೪೮ರ ಜೊ಼ಜಿಲಾ ಕದನದ ೧೫ ನಿಮಿಷಗಳ ತುಣುಕÀನ್ನು ವಸ್ತು ಸಂಗ್ರಹಾಲಯದ ಒಂದು ವಿಭಾಗದಲ್ಲಿ ಪ್ರದರ್ಶಿಸಲಾಗುವುದು ಮತ್ತು ಭಾರತೀಯ ಸೇನೆಯಿಂದ ಸಂಗ್ರಹಿಸಿದ ಈ ಸಾಕ್ಷö್ಯಚಿತ್ರದಲ್ಲಿ ಜನರಲ್ ತಿಮ್ಮಯ್ಯ ಅವರ ಅಭೂತ ಪೂರ್ವ ಸಾಧನೆಗಳು ಬಿಂಬಿತವಾಗಿವೆೆ. ವಸ್ತು ಸಂಗ್ರಹಾಲಯದ ಸಂಪೂರ್ಣ ಪ್ರವಾಸವು ವೀಕ್ಷಕರನ್ನು ಸೇನೆಗೆ ಸೇರುವಂತೆ ಪ್ರೇರೇಪಿಸುವುದರÀಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ನಿವೃತ್ತ ಮೇಜರ್ ನಂದಾ ನಂಜಪ್ಪ ಅವರ ಮುಕ್ತ ಅನಿಸಿಕೆ ಹೀಗಿದೆ:- “ಖಿhe ಟegeಟಿಜ (ಉeಟಿeಡಿಚಿಟ ಏS ಖಿhimಚಿiಚಿh) ಟives oಟಿ…”