ಮಡಿಕೇರಿ, ಜ. ೨೩: ಮೈಸೂರಿನ ಸುಯೋಗ್ ಆಸ್ಪತ್ರೆಯ ವತಿಯಿಂದ ತಾ. ೨೫ ರಿಂದ ೩೦ ರವರೆಗೆ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಉಚಿತ ಹೃದ್ರೋಗ ಮತ್ತು ಆ್ಯಂಜಿಯೋಗ್ರಾA ಮತ್ತು ಆ್ಯಂಜಿಯೋಪ್ಲಾ ್ಯಸ್ಟಿ ತಪಾಸಣಾ ಶಿಬಿರ ನಡೆಯಲಿದೆ ಎಂದು ಸುಯೋಗ್ ಆಸ್ಪತ್ರೆಯ ಅಧ್ಯಕ್ಷÀ ಡಾ. ಎಸ್.ಪಿ. ಯೋಗಣ್ಣ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಸುಯೋಗ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಆದಿತ್ಯ ಉಡುಪ ಅವರ ನೇತೃತ್ವದಲ್ಲಿ ಮೂರು ಮಂದಿ ಖ್ಯಾತ ವೈದ್ಯರ ತಂಡ ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಪ್ರತಿನಿತ್ಯ ೬೦ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುವುದು. ಆಸಕ್ತರು ತಮ್ಮ ಹೆಸರುಗಳನ್ನು ತಾ. ೨೫ ರೊಳಗೆ ದೂ.ಸಂ ೦೮೨೧-೨೫೩೩೬೦೦, ೨೫೬೬೯೬೬ ಹಾಗೂ ೯೭೩೯೫೫೫೯೦೮ರಲ್ಲಿ ನೋಂದಾಯಿಸಿ ಕೊಳ್ಳಬಹುದು. ನೋಂದಾಯಿಸಿ ಕೊಂಡ ಎಲ್ಲರಿಗೂ ಉಚಿತ ಸಲಹೆ ನೀಡಲಾಗುವುದು, ಅವಶ್ಯ ವಿರುವವರಿಗೆ ಆ್ಯಂಜಿಯೋಪ್ಲ್ಯಾಸಿ ಉಚಿತವಾಗಿ ಮಾಡಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಹೃದ್ರೋಗ ತಜ್ಞ ಡಾ. ಕೆ. ಆದಿತ್ಯ ಉಡುಪ, ಕಾನೂನು ಸಲಹೆಗಾರ ತಮ್ಮಣ್ಣ ಗೌಡ ಇದ್ದರು.