ದಿ. ಪೂವಯ್ಯ ಅವರ ಪುತ್ರ ಮಂಞAಪುರ ನವೀನ್ (ಉತ್ತಪ್ಪ) ಇಂದು ಬೆಂಗಳೂರಿನಲ್ಲಿ ನಿಧನರಾ ದರು. ಮೃತರ ಅಂತ್ಯಕ್ರಿಯೆ ತಾ. ೨೨ ರಂದು (ಇಂದು) ಸ್ವಗ್ರಾಮ ನರಿಯಂದಡ ಚೆಯ್ಯಂಡಾಣೆಯಲ್ಲಿ ನಡೆಯಲಿದೆ.

*ಕೋಕೇರಿ ಗ್ರಾಮದ ಕುಮ್ಮಂಡ ಅಪ್ಪಚ್ಚು (೮೪) ಅವರು ತಾ. ೨೧ ರಂದು ನಿಧನರಾದರು. ತಾ. ೨೨ (ಇಂದು) ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

*ನಾಪೋಕ್ಲು ಬೇತು ಗ್ರಾಮದ ಬಾಸ್ಕರ್ ಅವರ ಪತ್ನಿ ಸರಸ್ವತಿ (೬೦) ಅವರು ತಾ. ೨೧ ರಂದು ನಿಧನರಾ ದರು. ಅಂತ್ಯಕ್ರಿಯೆ ನಾಪೋಕ್ಲು ಬೇತು ಗ್ರಾಮದಲ್ಲಿ ನಡೆಯಿತು.

*ನಿವೃತ ಸುಬೇದಾರ ಪಾಲೂರು ಗ್ರಾಮದ ಮಂದನೆರವAಡ ಬಬ್ಬು ಗಣಪತಿ ಪತ್ನಿ ಶಾಂತಿ ಚೋಂದಮ್ಮ (೮೪-ತಾಮನೆ ಬೊಳ್ತಂಡ) ಅವರು ತಾ. ೨೧ ರಂದು ನಿಧನರಾದರು. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.

*ಕೊಳ್ತೋಡು ಬೈಗೋಡು ಗ್ರಾಮದ ಕೇಳಪಂಡ ದಿ. ಕಾರ್ಯಪ್ಪ ಅವರ ಪತ್ನಿ ನೀಲಮ್ಮ (ಲವ್ಲಿ-೮೬, ತಾಮನೆ ಬಲ್ಯಮಾಡ) ತಾ.೨೧ ರಂದು ನಿಧನರಾದರು. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.

*ಐಕೊಳ ಗ್ರಾಮದ ಪೋರೆಯಂಡ ಕುಟುಂಬ ಪಟ್ಟೇದಾರ ಉತ್ತಪ್ಪ (ರಾಜು-೮೦) ಅವರು ತಾ. ೨೧ ರಂದು ನಿಧನ ಹೊಂದಿದರು. ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.

*ಭಾಗಮಂಡಲ-ಕೋರAಗಾಲ ಗ್ರಾಮದ ನಂಗಾರು ಕಾಳಪ್ಪ ಅವರ ಪತ್ನಿ ಲೀಲಾವತಿ (೭೦) ಅವರು ತಾ. ೨೧ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೨೨ ರಂದು (ಇಂದು) ಮಧ್ಯಾಹ್ನ ೧೨ ಗಂಟೆಗೆ ಕೋರಂಗಾಲ ಗ್ರಾಮದ ಮೃತರ ಸ್ವಗೃಹದಲ್ಲಿ ನಡೆಯಲಿದೆ.