*ಸಿದ್ದಾಪುರ, ಜ. ೨೧: ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ.ಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ವ್ಯಕ್ತವಾದ ಹಿನ್ನೆಲೆ ಉನ್ನತ ತನಿಖೆಗೆ ಸದಸ್ಯರು ಒತ್ತಾಯಿಸಿದರು.
ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ಲೆಕ್ಕಪತ್ರ ಪರಿಶೀಲನಾ ಸಭೆಯಲ್ಲಿ ಕೆಲವು ನೂತನ ಸದಸ್ಯರುಗಳು ಲೆಕ್ಕಪತ್ರದ ವಿವರದಲ್ಲಿರುವ ನ್ಯೂನತೆಗಳನ್ನು ಪತ್ತೆಹಚ್ಚಿ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ೨೦೧೮-೧೯ ಮತ್ತು ೨೦೧೯-೨೦ ರಲ್ಲಿ ಉದ್ಯೋಗ ಖಾತ್ರಿ, ೧೪ನೇ ಹಣಕಾಸು, ಪಂಚಾಯ್ತಿ ಅನುದಾನದಡಿ ಹಣ ದುರುಪಯೋಗ ಬಗ್ಗೆ ಆರೋಪ ಕೇಳಿಬಂದಿದೆ.
ಶಾಲೆಯ ಕೊಳವೆ ಬಾವಿ ಸ್ಥಳಾಂತರಕ್ಕೆ ಸಂಬAಧಿಸಿದAತೆ ಒಂದೇ ಕಾಮಗಾರಿಗೆ ಒಂದು ಬಾರಿ ೪೦ ಸಾವಿರ ರೂ. ಮತ್ತೊಂದು ಬಾರಿ ೩೩ ಸಾವಿರ ರೂ.ಗಳನ್ನು ಬಿಡುಗಡೆ ಮಾಡಿರುವುದು ಕಂಡುಬAದಿದೆ.
ಕAಪ್ಯೂಟರ್, ಜೆರಾಕ್ಸ್ ಯಂತ್ರ, ಪ್ರಿಂಟರ್ ಹಾಗೂ ಸಿಸಿ ಕ್ಯಾಮರಾ ಖರೀದಿಗೆ ಸಂಬAಧಿಸಿದAತೆ ಎರೆಡೆರಡು ಬಿಲ್ ಪಾವತಿಯಾಗಿದೆ. ಪಂಚಾಯ್ತಿ ಸದಸ್ಯ ಭುವನೇಂದ್ರ ಆರೋಪಿಸಿದರು. ಅತ್ತಿಮಂಗಲ ಕೆರೆಯ ಹೂಳೆತ್ತಿರುವುದು, ಅಭ್ಯತ್ಮಂಗಲ-ತ್ಯಾಗತ್ತೂರು ಕಾಂಕ್ರಿಟ್ ರಸ್ತೆ ನಿರ್ಮಾಣ ಸೇರಿದಂತೆ ಇನ್ನೂ ಕೆಲವು ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು ಶಂಕೆ ವ್ಯಕ್ತಪಡಿಸಿ ವಿಷಯ ಪ್ರಸ್ತಾಪಿಸಿದ ಮತ್ತೋರ್ವ ಸದಸ್ಯ ಮನುಮಹೇಶ್, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಸೋಮವಾರಪೇಟೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಈ ಸಂಬAಧ ದೂರು ನೀಡುವುದಾಗಿ ತಿಳಿಸಿದರು. ಪಂಚಾಯಿತಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಶಾಸಕರು ಹೆಚ್ಚಿನ ಕಾಳಜಿ ವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲೆಕ್ಕ ಪರಿಶೋಧಕರಿಗೆ ಸೂಕ್ತ ಮಾಹಿತಿಯನ್ನು ನೀಡಿಲ್ಲ ಮತ್ತು ೧೭೯೦ ಸಂಖ್ಯೆಯ ಲೆಕ್ಕಪತ್ರ ಪುಸ್ತಕ ನಾಪತ್ತೆಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪಂಚಾಯ್ತಿಯ ಆಡಳಿತಾಧಿಕಾರಿ ಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
-ಅಂಚೆ ಮನೆ ಸುಧಿ