ಶನಿವಾರಸAತೆ, ಜ. ೨೨: ಕುಶಾಲನಗರ ಹೆದ್ದಾರಿಯ ಆಲದಮರ ಬಳಿಯ ಬಾಣವಾರ-ಭುವಂಗಾಲ ಬಳಿ ರಸ್ತೆಯ ಬದಿಯ ಮರವೊಂದಕ್ಕೆ ಮಾರುತಿ ಒಮ್ನಿ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಅಪ್ಪಳಿಸಿದ ಪರಿಣಾಮ ವ್ಯಾನ್ ಚಲಾಯಿಸುತ್ತಿದ್ದ ಚಾಲಕ ಸೇರಿದಂತೆ ಜೊತೆಯಲ್ಲಿದ್ದ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದ್ದು ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶನಿವಾರಸಂತೆಯ ನಿವಾಸಿ ರಾಜಶೇಖರ್ ಎಂಬುವರ ಪುತ್ರ ಯಶ್ವಂತ್ ವಕೀಲರಾಗಿದ್ದು ಇಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಯಶ್ವಂತ್ ಅವರು ಗೋಪಾಲಪುರದ ತನ್ನ ಸ್ನೇಹಿತ ನವೀನ್ ಎಂಬುವರ ಜೊತೆಯಲ್ಲಿ ಶನಿವಾರಸಂತೆಯಿAದ ಕುಶಾಲನಗರಕ್ಕೆ ತನ್ನ ಮಾರುತಿ ಒಮ್ನಿ ವ್ಯಾನಿನಲ್ಲಿ ತೆರಳುತ್ತಿದ್ದರು. ಆಲದಮರ ತಿರುವಿನ ಬಾಣವಾರ-ಭುವಂಗಾಲದ ಬಳಿ ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ನಿಯಂತ್ರಣ ತಪ್ಪಿ ಅಪ್ಪಳಿಸಿದೆ, ಅಪಘಾತದಿಂದ ಯಶ್ವಂತ್ ಮತ್ತು ನವೀನ್ ಸ್ಥಿತಿ ಗಂಭೀರಗೊAಡ ಹಿನ್ನೆಲೆ ಸ್ಥಳೀಯರು ನಜ್ಜುಗುಜ್ಜಾದ ಕಾರಿನೊಳಗಿದ್ದ ಇಬ್ಬರು ಗಾಯಾಳುಗಳನ್ನು ಹೊರ ಎಳೆದು ಬೇರೆ ವಾಹನದ ಮೂಲಕ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಯಿತು. ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.