ಮಡಿಕೇರಿ, ಜ. ೨೧: “ಹಸಿವು ಮುಕ್ತ ಕರ್ನಾಟಕ”ದ ದ್ಯೇಯದೊಂದಿಗೆ ಪ್ರಾರಂಭಗೊAಡ “ಅನ್ನಭಾಗ್ಯ ಯೋಜನೆ”ಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ೧,೧೦,೨೧೬ ಕುಟುಂಬಗಳು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಂತೆ ಆದ್ಯತಾ (ಅಂತ್ಯೋದಯ) ಪ್ರತೀ ಪಡಿತರ ಚೀಟಿದಾರರಿಗೆ ೩೫ ಕೆ.ಜಿ. ಅಕ್ಕಿ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತೀ ಸದಸ್ಯರಿಗೆ ೫ ಕೆ.ಜಿ. ಅಕ್ಕಿಯನ್ನು ಹಾಗೂ ಆದ್ಯತಾ (ಬಿಪಿಎಲ್) ೨ ಕೆ.ಜಿ. ಗೋಧಿಯನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ. ಈ “ಅನ್ನಭಾಗ್ಯ ಯೋಜನೆ”ಯನ್ನು ಆದ್ಯತೇತರ (ಎಪಿಎಲ್) ಪಡಿತರ ಚೀಟಿದಾರರಿಗೂ ಕೂಡ ವಿಸ್ತರಣೆ ಮಾಡಲಾಗಿದ್ದು, ಪಡಿತರಕ್ಕಾಗಿ ನೊಂದಾವಣೆ ಮಾಡಿಕೊಂಡAತಹ ೨೧,೬೧೬ ಆದ್ಯತೇತರ (ಎಪಿಎಲ್) ಪಡಿತರ ಚೀಟಿದಾರರಿಗೆ ಕೂಡ ೧ ಯೂನಿಟ್ ಪಡಿತರ ಚೀಟಿಗೆ ೫ ಕೆ.ಜಿ. ಅಕ್ಕಿ, ಎರಡು ಹಾಗೂ ಎರಡಕ್ಕಿಂತ ಹೆಚ್ಚು ಯೂನಿಟ್ ಇರುವ ಪಡಿತರ ಚೀಟಿಗೆ ೧೦ ಕೆ.ಜಿ. ಅಕ್ಕಿಯನ್ನು ಪ್ರತೀ ಕೆ.ಜಿ.ಗೆ ರೂ. ೧೫ ರಂತೆ ಪಡೆದು ವಿತರಿಸಲಾಗುತ್ತಿದೆ.

ಸರ್ಕಾರವು ಜಿಲ್ಲೆಯಲ್ಲಿರುವ ೩,೦೩೪ ಆದ್ಯತಾ (ಬಿಪಿಎಲ್) ಅನಿಲ ರಹಿತ ಪಡಿತರ ಚೀಟಿದಾರರಿಗೆ ೩ ಲೀಟರ್‌ನಂತೆ ಹಾಗೂ ಗ್ಯಾಸ್ ಹೊಂದಿರುವ ಎಲ್ಲಾ ವರ್ಗದ ೬೧,೪೭೫ ಪಡಿತರ ಚೀಟಿದಾರರು ಸೀಮೆಎಣ್ಣೆಗಾಗಿ ನೋಂದಾಯಿಸಿಕೊAಡಿದ್ದು, ಸದರಿ ಪಡಿತರ ಚೀಟಿದಾರರಿಗೆ ೧ ಲೀಟರ್‌ನಂತೆ ಸೀಮೆಎಣ್ಣೆಯನ್ನು ರೂ ೩೫ ರಂತೆ ಪಡೆದು ವಿತರಿಸಲಾಗುತ್ತಿದೆ.

ಮುಂದುವರೆದು ಕೋವಿಡ್-೧೯ರ ಸಂದರ್ಭದಲ್ಲಿ ಕೇಂದ್ರ ಸರ್ಕಾರದ “ಪಿಎಂಜಿಕೆಎವೈ ಯೋಜನೆ”ಯಡಿ ಏಪ್ರಿಲ್ ೨೦೨೦ರ ಮಾಹೆಯಿಂದ ನವೆಂಬರ್-೨೦೨೦ರ ಮಾಹೆಯವರೆಗೆ ಜಿಲ್ಲೆಯ ಆದ್ಯತಾ ಕುಟುಂಬದ (ಬಿಪಿಎಲ್ ಮತ್ತು ಎಎವೈ) ಪ್ರತೀ ಸದಸ್ಯರಿಗೆ ೫ ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗಿರುತ್ತದೆ ಹಾಗೂ ಜುಲೈ-೨೦೨೦ರ ಮಾಹೆಯಿಂದ ನವೆಂಬರ್-೨೦೨೦ರ ಮಾಹೆಯವರೆಗೆ ಪ್ರತೀ ಆದ್ಯತಾ ಕುಟುಂಬದ ಪಡಿತರ ಚೀಟಿ ಕುಟುಂಬಗಳಿಗೆ ೧ ಕೆ.ಜಿ. ಕಡಲೆಕಾಳನ್ನು ಉಚಿತವಾಗಿ ವಿತರಣೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.