ಕೂಡಿಗೆ, ಜ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ನೂತನವಾಗಿ ಗ್ರಾಮ ವಿಕಾಸ ಯೋಜನೆಯಡಿ ರೂ. ೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕ್ರೀಡಾ ಗ್ಯಾಲರಿ ಮತ್ತು ವೇದಿಕೆಯ ಕಟ್ಟಡದ ಉದ್ಘಾಟನೆ ಶಾಸಕ ಅಪ್ಪಚ್ಚು ರಂಜನ್ ನೆರವೇರಿಸಿದರು.
ನಂತರ ಮಾತನಾಡಿ, ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಯ ಅಡಿಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ಹಣವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಯನ್ನು ಕೈಗೊಳ್ಳಲು ನೀಡಲಾಗಿತ್ತು. ಅದರಂತೆ ಗ್ರಾಮ ಪಂಚಾಯಿತಿ ಸದಸ್ಯರ ಆದ್ಯತೆಯ ಮೇರೆಗೆ ಆಯಾ ಗ್ರಾಮದ ಪ್ರಮುಖ ಕಾಮಗಾರಿಗಳನ್ನು ಕೈಗೊಂಡು ಅದರಂತೆ ಕಾಮಗಾರಿ ಯನ್ನು ನಡೆಸಲಾಗಿದೆ. ಹುದುಗೂರು ಗ್ರಾಮದಲ್ಲಿ ರೂ. ೫ ಲಕ್ಷ ಹಣವನ್ನು ವಿನಿಯೋಗಿಸಿ ಸುಂದರವಾದ ಕ್ರೀಡಾ ವೇದಿಕೆಯ ಕಟ್ಟಡ ಮತ್ತು ಗ್ಯಾಲರಿ ಯನ್ನು ನಿರ್ಮಾಣ ಮಾಡಲಾಗಿದೆ ಇದರ ಸದುಪಯೋಗವನ್ನು ಗ್ರಾಮೀಣ ಕ್ರೀಡಾಪಟುಗಳು ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿದ್ದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರಿಗೆ ಅನುಕೂಲ ವಾಗುವಂತೆ ಕೇಂದ್ರ ಸರಕಾರದ ಯೋಜನೆಯ ಅಡಿಯಲ್ಲಿ ಯನ್ನು ನಿರ್ಮಾಣ ಮಾಡಲಾಗಿದೆ ಇದರ ಸದುಪಯೋಗವನ್ನು ಗ್ರಾಮೀಣ ಕ್ರೀಡಾಪಟುಗಳು ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿದ್ದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರಿಗೆ ಅನುಕೂಲ ವಾಗುವಂತೆ ಕೇಂದ್ರ ಸರಕಾರದ ಯೋಜನೆಯ ಅಡಿಯಲ್ಲಿ ಕ್ರೀಡಾಂಗಣದ ವ್ಯವಸ್ಥೆಗೆ ಹಣಕಾಸು ವ್ಯವಸ್ಥೆ ಇರುವುದರಿಂದ ಇದರ ಪ್ರಯೋಜನವನ್ನು ಪಡೆದು ಕೊಳ್ಳುವಂತೆ ಸಲಹೆ ನೀಡಿದರು
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚನ್ನಕೇಶವ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಗಿರೀಶ್, ಇಂಜಿನಿಯರ್ ವೀರೇಂದ್ರ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಜಯಣ್ಣ, ಗ್ರಾಮದ ಪ್ರಮುಖರು ಹಾಜರಿದ್ದರು.