ಶ್ರೀಮಂಗಲ, ಜ. ೨೨: ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ರೈತ ಚೆಟ್ಟಂಗಡ ನವೀನ್ ಭೀಮಯ್ಯ ಅವರಿಗೆ ಸೇರಿದ ಗಬ್ಬದ ಹಸುವಿನ ಮೇಲೆ ತಾ.೨೧ರ ರಾತ್ರಿ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.
ತಡರಾತ್ರಿಯಲ್ಲಿ ಸ್ಥಳಕ್ಕೆ ರೈತ ಸಂಘ ಮತ್ತು ಹಸಿರು ಸೇನೆಯ ಶ್ರೀಮಂಗಲ ಹೋಬಳಿ ರೈತ ಮುಖಂಡ ಚೆಟ್ಟಂಗಡ ಕಂಬ ಕಾರ್ಯಪ್ಪ ಹಾಗೂ ಚೆಟ್ಟಂಗಡ ಸಜನ್ ಸೋಮಣ್ಣ ಭೇಟಿ ನೀಡಿ ಸಂತ್ರಸ್ತ ರೈತನಿಗೆÀ ಬೆಂಬಲ ನೀಡಿ ಸಾಂತ್ವನ ಹೇಳಿದರು.
ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಅಧಿಕಾರಿಗಳೊಂದಿಗೆ ಹುಲಿಯನ್ನು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಂತೆ ಮತ್ತು ಸುತ್ತಮುತ್ತಲ ರೈತರ ಜಾನುವಾರುಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಸುರಕ್ಷಿತವಾದ ಕೊಟ್ಟಿಗೆ ನಿರ್ಮಿಸಲು ನೆರವು ನೀಡಬೇಕೆಂದು ಒತ್ತಾಯಿಸಿದರು. ಶ್ರೀಮಂಗಲ ವಲಯರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ್ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಗ್ರಾ.ಪಂ. ಸದಸ್ಯರಾದ ಕುಂಞAಗಡ ಕೃಷ್ಣ ಮತ್ತು ಚೊಟ್ಟೆಯಂಡಮಾಡ ವಿಶುರಂಜಿ, ಸರಿತಾರವರು ಆಗಮಿಸಿ ಗ್ರಾ.ಪಂ.ಯಿAದ ಕೊಟ್ಟಿಗೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಟಿ. ಶೆಟ್ಟಿಗೇರಿ ಗ್ರಾ.ಪಂ. ಕವಿತಾರವರು ಕೊಟ್ಟಿಗೆಯ ಅಳತೆಯನ್ನು ನೀಡಿದ್ದು, ಗ್ರಾ.ಪಂ.ಯಿAದ ಅಗತ್ಯ ನೆರವು ನೀಡುವ ಭರವಸೆ ನೀಡಿದರು.