*ಗೋಣಿಕೊಪ್ಪಲು, ಜ. ೨೨: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಪ್ರಜಾಪಿತ ಬ್ರಹ್ಮಶ್ರೀ ಅವರ ದಿನಾಚರಣೆಯನ್ನು ಸ್ಥಳೀಯ ಪ್ರಜಾಪಿತ ಕಚೇರಿಯಲ್ಲಿ ಆಚರಿಸಲಾಯಿತು.

ಈಶ್ವರಿ ವಿಶ್ವವಿದ್ಯಾನಿಲಯ ಮಡಿಕೇರಿ ಕೇಂದ್ರದ ಮುಖ್ಯಸ್ಥೆ ಗಾಯತ್ರಿ ಮೆಹೆಂಜಿ ಅವರು ಮನುಷ್ಯನಲ್ಲಿ ಸದ್ಭಾವನೆಯನ್ನು ಮೂಡಿಸಿ ನೆಮ್ಮದಿ ಹಾಗೂ ಶಾಂತಿಯುತ ಬದುಕನ್ನು ಸಾಗಿಸಲು ಪ್ರಜಾಪಿತ ಬ್ರಹ್ಮಶ್ರೀ ಅವರ ಸಂದೇಶಗಳು ಸಹಕಾರಿಯಾಗಲಿವೆ. ಮನುಷ್ಯನಿಗೆ ಸಂಪತ್ತಿಗಿAತ ಶಾಂತಿ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲರೂ ಈಶ್ವರಿ ವಿಶ್ವ ವಿದ್ಯಾನಿಲಯಕ್ಕೆ ಆಗಮಿಸಿ ಶಾಂತಿಯ ಸಂದೇಶವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಬಳಿಕ ಭಜನೆ ಹಾಗೂ ಪ್ರವಚನ ನಡೆಯಿತು. ಬಿ.ಕೆ. ಧನಲಕ್ಷಿö್ಮ, ಬಿ.ಕೆ. ರಾಮಚಂದ್ರ, ಬಿ.ಕೆ. ಕಾಂತಕ್ಕ, ಬಿ.ಕೆ. ಪುಷ್ಪ, ಬಿ.ಕೆ. ಮಣಿ, ಬಿ.ಕೆ. ಕೋಮಲ ಹಾಜರಿದ್ದರು.