ನೇತಾಜಿ ಸುಬಾಶ್‌ಚಂದ್ರ ಬೋಸ್ ಅವರು ೧೮೯೭ ಜನವರಿ ೨೩ ರಂದು ಕಟಕ್‌ನಲ್ಲಿ ಜನಿಸಿದರು. ತಂದೆ ಜಾನಕಿನಾಥ್‌ಬೋಸ್, ತಾಯಿ ಪ್ರಭಾವತಿ ದೇವಿ ಕುಟುಂಬದ ೧೪ ಮಕ್ಕಳಲ್ಲಿ ೯ನೇಯವರಾಗಿ ಜನನ. ಯುರೋಪಿಯನ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಮುಂದಿನ ಶಿಕ್ಷಣ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅವರಲ್ಲಿನ ಸಹಜ ರಾಷ್ಟಿçÃಯತೆಯ ಕೆಚ್ಚು, ಪ್ರಕಟವಾಗಿದ್ದುದು, ಭಾರತದ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ್ದಕ್ಕಾಗಿ ಪ್ರೊಫೆಸರ್‌ರೊಬ್ಬರ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಾಗ, ಆನಂತರ ಕೊಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿನ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಕೆ, ೧೯೧೮ರಲ್ಲಿ ಪಿಲಾಸಫಿಯೊಂದಿಗೆ ಬಿ.ಎ. ತೇರ್ಗಡೆ (ಪರಿಶ್ರಮ ಮತ್ತು ತ್ಯಾಗದಿಂದ ಮಾತ್ರ ನಮ್ಮ ರಾಷ್ಟçವನ್ನು ಕಟ್ಟಬಹುದು ಎಂದು ಅಣ್ಣ ಶರತ್‌ಚಂದ್ರಬೋಸ್‌ಗೆ ಪತ್ರ ಬರೆದು ೧೯೨೧ರ ಏಪ್ರಿಲ್ ೨೩ ರಂದು ಐಸಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಭಾರತಕ್ಕೆ ಮರಳಿದರು. ಕೊಲ್ಕತ್ತಾದಲ್ಲಿ ‘‘ಸ್ವರಾಜ್’’ ವರ್ತಮಾನ ಪತ್ರಿಕೆಯನ್ನು ಆರಂಭಿಸಿದರು., ೧೯೨೩ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಬಂಗಾಳ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ೧೯೨೪ರಲ್ಲಿ ಕೊಲ್ಕತ್ತಾ ಮಹಾನಗರ ಪಾಲಿಕೆಯ ಸಿಇಓ, ೧೯೨೫ರಲ್ಲಿ ಬಂಧನ, ಜೈಲಿನಲ್ಲಿ ಕ್ಷಯರೋಗ, ೧೯೨೭ರಲ್ಲಿ ಜೈಲಿನಿಂದ ಬಿಡುಗಡೆ ನಂತರ ನೆಹರೂರೊಂದಿಗೆ ಸ್ವಾತಂತ್ರ ಹೋರಾಟದಲ್ಲಿ ಭಾಗಿ, ೧೯೩೭ರಲ್ಲಿ ಭಾರತ ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ನೇತಾಜಿ ಭಾರತದ ಸ್ವಾತಂತ್ರö್ಯಕ್ಕಾಗಿ ಭಾರತದ ಹೊರಗಿನಿಂದ ಹೋರಾಡುತ್ತಿದ್ದರು. ಅದಕ್ಕಾಗಿ ಅವರು ಜಪಾನಿನಲ್ಲಿ ನೆಲೆಸಿದ್ದರು. ಅಲ್ಲಿ ಭಾರತ ರಾಷ್ಟಿçÃಯ ಸೇನೆಯನ್ನು ಕಟ್ಟಿದರು. ಅದರ ಸಂಘಟನೆಯಲ್ಲಿ ಇತರ ರಾಷ್ಟçಗಳಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ೧೯೪೫ ಆಗಸ್ಟ್ ೧೮ ರಂದು ಅವರು ಪ್ರಯಾಣಿಸುತ್ತಿದ್ದ ವಿಮಾನ ತೈವಾನ್‌ನಲ್ಲಿ ಅಪಘಾತಕ್ಕೀಡಾಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರು ಜಪಾನಿನ ಮಿಲಿಟರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆಗಸ್ಟ್ ೨೦ ರಂದು ಟೋಕಿಯೋದಲ್ಲಿನ ಥಾಯಿಹೋಕು ಚಿತಾಗೃಹದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಟೋಕಿಯೋದ ರೆಂಕೋಜಿ ಮಂದಿರದ ಆವರಣದಲ್ಲಿ ನೇತಾಜಿ ಸ್ಮರಣಾರ್ಥ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅವರ ಚಿತಾಭಸ್ಮವನ್ನು ಚಿನ್ನದ ಪಗೋಡಾದಲ್ಲಿ ಒಂದು ಮಂದಿರದಲ್ಲಿ ರಕ್ಷಿಸಿಡಲಾಗಿದೆ. ನೇತಾಜಿ ಪತ್ನಿ ಎಮಿಲಿ ಚಂಕ್ಲ್, ಮಗಳು ಅನಿತಾಬೋಸ್.