ಚೆಟ್ಟಳ್ಳಿ, ಜ. ೨೨: ಪ್ರಾಥÀಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಚೆಟ್ಟಳ್ಳಿ ಪತ್ರಕರ್ತ ಅಂಚೆಮನೆ ಸುಧಿ ಕುಮಾರ್, ಪುತ್ತರಿರ ಕರುಣ್ ಕಾಳಯ್ಯ ಹಾಗೂ ರಾಜ್ಯ ಮಾಹಿತಿ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷ ಪುತ್ತರಿರ ದೇವಯ್ಯ ಅವರನ್ನು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಸನ್ಮಾನಿಸಿದರು. ಈ ಸಂದರ್ಭ ಸಂಘದ ನಿರ್ದೇಶಕ ಧನಂಜಯ, ಆಂತರಿಕ ಲೆಕ್ಕಪರಿಶೋಧಕ ಹೆಚ್.ಬಿ. ರಮೇಶ್, ಗುತ್ತಿಗೆದಾರ ಅಂಬುದಾಸ್, ಸಿಬ್ಬಂದಿಗಳು ಭಾಗವಹಿಸಿದ್ದರು.