ಸೋಮವಾರಪೇಟೆ, ಜ ೨೧: ಕೃಷಿ ಕಾರ್ಯ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಗುದ್ದಲಿಗೆ ಸಿಲುಕಿ ಗಾಯಗೊಂಡ ನಾಗರ ಹಾವಿಗೆ ಚಿಕಿತ್ಸೆ ನೀಡಿ, ಅರಣ್ಯಕ್ಕೆ ಬಿಡಲಾಯಿತು.
ಪಟ್ಟಣದ ಜನತಾ ಕಾಲೋನಿಯಲ್ಲಿ ಕ್ಯಾನೆ ಗೆಣಸು ಕೃಷಿ ಮಾಡಿದ್ದ ಜಾಗದಲ್ಲಿ ಬೀಡುಬಿಟ್ಟಿದ್ದ ನಾಗರ ಹಾವು, ಇಂದು ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಗುದ್ದಲಿಗೆ ಸಿಲುಕಿ ಗಾಯಗೊಂಡಿತು. ತಕ್ಷಣ ಸ್ಥಳಕ್ಕೆ ತೆರಳಿದ ಸ್ನೇಕ್ ಪ್ರವೀಣ್, ಗಾಯಗೊಂಡ ಹಾವನ್ನು ಸೆರೆ ಹಿಡಿದು, ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸಿದರು.
ವೈದ್ಯರಾದ ನಾಗರಾಜ್ ಅವರು ಹಾವಿನ ದೇಹಕ್ಕೆ ೬ ಹೊಲಿಗೆ ಹಾಕಿ, ಔಷಧಿ ನೀಡಿದ ನಂತರ ಯಡವನಾಡು ಅರಣ್ಯಕ್ಕೆ ಬಿಡಲಾಯಿತು.