ಕುಶಾಲನಗರ, ಜ. ೨೨: ಬಸವನಹಳ್ಳಿಯಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ವಹಣೆ ಕೊರತೆಯೊಂದಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ೨೦೧೨ ರಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿ, ಬೊಳ್ಳೂರು ಸೇರಿದಂತೆ ಸುತ್ತಮುತ್ತಲು ಕೆಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸಲು ಕಾವೇರಿಯಿಂದ ನೀರು ಹಾಯಿಸಿ ಸರಬರಾಜು ಮಾಡಲು ಈ ಘಟಕವನ್ನು ಬಸವನಹಳ್ಳಿಯಲ್ಲಿ ಸ್ಥಾಪಿಸಲಾಗಿದೆ.

ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ನೀರಿನ ಗುಣಮಟ್ಟ ಕುಸಿತದೊಂದಿಗೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಕುಶಾಲನಗರ, ಜ. ೨೨: ಬಸವನಹಳ್ಳಿಯಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ವಹಣೆ ಕೊರತೆಯೊಂದಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ೨೦೧೨ ರಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿ, ಬೊಳ್ಳೂರು ಸೇರಿದಂತೆ ಸುತ್ತಮುತ್ತಲು ಕೆಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರೊದಗಿಸಲು ಕಾವೇರಿಯಿಂದ ನೀರು ಹಾಯಿಸಿ ಸರಬರಾಜು ಮಾಡಲು ಈ ಘಟಕವನ್ನು ಬಸವನಹಳ್ಳಿಯಲ್ಲಿ ಸ್ಥಾಪಿಸಲಾಗಿದೆ.

ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ನೀರಿನ ಗುಣಮಟ್ಟ ಕುಸಿತದೊಂದಿಗೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಇಲ್ಲಿನ ಹಲವು ಉಪಕರಣಗಳು ದುಸ್ಥಿತಿಗೆ ತಲುಪಿದೆ. ಸ್ವಚ್ಛತೆಯ ಕೊರತೆಯೊಂದಿಗೆ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನೀರು ಶುದ್ಧೀಕರಣ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಬಾಲಕೃಷ್ಣ ನಾಯ್ಡು ಆರೋಪಿಸಿದ್ದಾರೆ. ನೀರಿನ ಟ್ಯಾಂಕ್‌ನಲ್ಲಿ ಕೆಸರು ಮಿಶ್ರಿತ ಅಂಶಗಳು ತುಂಬಿದ್ದು ಅದನ್ನು ಶುದ್ಧೀಕರಿಸುವ ಗೋಜಿಗೆ ಹೋಗುತ್ತಿಲ್ಲ. ನೇರವಾಗಿ ನೀರನ್ನು ನಲ್ಲಿ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಇದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ಟ್ಯಾಂಕ್ ಬಳಿ ಶುದ್ಧೀಕರಣ ಘಟಕದಲ್ಲಿ ಇಲಿಗೂಡುಗಳು ಕಂಡುಬAದಿದ್ದು ಇದು ಇನ್ನೂ ಅಪಾಯಕಾರಿಯಾಗಿ ಪರಿಣಮಿಸಲಿದೆ. ಬಹುತೇಕ ಉಪಕರಣಗಳು ತುಕ್ಕು ಹಿಡಿದಿದ್ದು ಕೂಡಲೇ ಇದರ ಮರುಜೋಡಣೆ ಅಗತ್ಯವಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕಾವೇರಿ ನದಿಯಿಂದ ನೀರೆತ್ತಿ ಶುದ್ದೀಕರಿಸಿ ವಿವಿಧ ಗ್ರಾಮಗಳಿಗೆ ಈ ಘಟಕ ನೀರು ಸರಬರಾಜು ಮಾಡುತ್ತಿದೆ. ಗುಡ್ಡೆಹೊಸೂರು ಗ್ರಾ.ಪಂ.ನಲ್ಲಿ ಕಳೆದ ೩೦ ವರ್ಷಗಳಿಂದ ವಾಟರ್‌ಮೆನ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಓರ್ವನನ್ನು ಇದರ ನಿರ್ವಹಣೆಗೆ ನಿಯೋಜಿಸಲಾಗಿದೆ. ಕೂಡಲೇ ಈ ಘಟಕಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಕಕ್ಕೆ ಪಂಚಾಯಿತಿ ಕ್ರಮ ಕೈಗೊಳ್ಳಬೇಕಿದೆ. ಕಾಲಕಾಲಕ್ಕೆ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ಕಲ್ಪಿಸಬೇಕಿದೆ ಎಂದು ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ಆಗ್ರಹಿಸಿದ್ದಾರೆ.

-ಚಂದ್ರಮೋಹನ್