ಸೋಮವಾರಪೇಟೆ, ಜ. ೨೦: ಭೂಮಿಪೂಜೆ ನೆರವೇರಿ ಬರೋಬ್ಬರಿ ೭ ವರ್ಷಗಳ ನಂತರ ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದ ಕನಸು ನನಸಾಗುತ್ತಿದ್ದು, ಜಿಲ್ಲೆಯಲ್ಲಿಯೇ ದೊಡ್ಡದಾದ ಟರ್ಫ್ ಮೈದಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನ ನಿರ್ಮಾ ಣವಾಗಬೇಕೆಂಬ ಹಾಕಿ ಪ್ರೇಮಿಗಳ ಕನಸು ಇದೀಗ ನನಸಾಗುವ ಹಂತದಲ್ಲಿದ್ದು, ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.೨೦೧೩ರಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. ೩.೪೦ ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು.
ಕಳೆದ ತಾ. ೧೪.೦೩.೨೦೧೩ ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಂದಿನ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಅಂದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ. ಶಿವಪ್ಪ ಅವರು ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಆದರೆ ಬರೋಬ್ಬರಿ ಆರು ವರ್ಷ ಕಳೆದರೂ ಇಲ್ಲಿ ಟರ್ಫ್ ಕಾಮಗಾರಿ ನಡೆಯಲಿಲ್ಲ. ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಜೂನಿಯರ್ ಕಾಲೇಜು ಮೈದಾನದಲ್ಲಿಯೇ ಟರ್ಫ್ ನಿರ್ಮಾಣವಾಗಬೇಕು ಎಂಬ ಆಶಯವಿದ್ದರೂ ಕೆಲವರು ಮಾತ್ರ ಇದಕ್ಕೆ ನಿರಂತರ ಅಡ್ಡಗಾಲು ಹಾಕಿ ಟರ್ಫ್ ಮೈದಾನವನ್ನು ಬೇರೆಡೆಗೆ ಸ್ಥಳಾಂತರಿಸಲು ಯತ್ನಿಸುತ್ತಿದ್ದರು.
(ಮೊದಲ ಪುಟದಿಂದ)
ಆದರೆ ಛಲಬಿಡದ ಸ್ಥಳೀಯ ಹಾಕಿ ಪ್ರೇಮಿಗಳು ಶಾಸಕ ಅಪ್ಪಚ್ಚು ರಂಜನ್ ಅವರ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಈ ಹಿಂದಿನ ಎಸ್ಟಿಮೇಟ್‌ಗಿಂತಲೂ ರೂ. ೭೫ ಲಕ್ಷ ಹೆಚ್ಚು ಅನುದಾನ ಒದಗಿಸಿ ಒಟ್ಟು ರೂ. ೪.೧೫ ಕೋಟಿ ವೆಚ್ಚದಲ್ಲಿ ಟರ್ಫ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಈ ೬ ವರ್ಷದಲ್ಲಿ ಮೈದಾನದ ಒಂದು ಬದಿಯಲ್ಲಿ ರೂ. ೮೦ ಲಕ್ಷ ವೆಚ್ಚದಲ್ಲಿ ತಡೆಗೋಡೆ, ಮೈದಾನದ ಒಳಗೆ ಸಣ್ಣ ಚರಂಡಿ ನಿರ್ಮಾಣವಾಗಿದನ್ನು ಬಿಟ್ಟರೆ ಉಳಿದಂತೆ ಯಾವುದೇ ಕಾಮಗಾರಿ ನಡೆದಿರಲಿಲ್ಲ. ಈ ಬಗ್ಗೆ ರಾಜ್ಯ ವಿಧಾನ ಸಭೆಯ ಅರ್ಜಿಗಳ ವಿಚಾರಣೆ ಸಮಿತಿಗೆ ಟರ್ಫ್ ವಿಚಾರವಾಗಿ ಶಾಸಕ ರಂಜನ್ ಅರ್ಜಿ ಸಲ್ಲಿಸಿದ್ದು, ಅಲ್ಲಿ ತುರ್ತು ವಿಚಾರಣೆ ನಡೆದು ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರ ನೀಡಿದ್ದರಿಂದ ಕಳೆದ ಒಂದು ವರ್ಷದಿಂದ ಕಾಮಗಾರಿಗೆ ಜೀವ ದೊರೆತಿದೆ.
ಈ ಹಿಂದೆ ರೂ. ೩.೪೦ ಕೋಟಿ ಅನುದಾನ ಒದಗಿಸಿದ್ದು, ಜಿಎಸ್‌ಟಿ ಶೇ. ೧೮ ರಷ್ಟು ತಗಲುವದರಿಂದ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರ ಹಿಂದೇಟು ಹಾಕಿದ್ದರು. ಇದೀಗ ರೂ. ೭೫ ಲಕ್ಷ ಹೆಚ್ಚುವರಿಯಾಗಿ ಅನುದಾನ ನಿಗದಿಗೊಳಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಕಚೇರಿಯಿಂದ ಟೆಂಡರ್ ಪಡೆದಿರುವ ಕಂಪೆನಿಗೆ ಕಾರ್ಯಾದೇಶ ನೀಡಲಾಗಿದ್ದು, ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದೆ.
ಟರ್ಫ್ ಅಳವಡಿಕೆಗೆ ಸಂಬAಧಿಸಿದAತೆ ಶೇ. ೬೫ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಓವರ್ ಹೆಡ್ ಟ್ಯಾಂಕ್, ಮೈದಾನದ ಸುತ್ತಲೂ ಫೆನ್ಸಿಂಗ್, ತಡೆಗೋಡೆ ನಿರ್ಮಾಣ, ಟರ್ಫ್ನ ಮ್ಯಾಟ್ ಅಳವಡಿಕೆ ಕಾಮಗಾರಿಗಳು ಬಾಕಿ ಉಳಿದಿವೆ. ಕಳೆದ ೩ ತಿಂಗಳಿನಿAದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಮೈದಾನ ನಿರ್ಮಾಣ ಕಾಮಗಾರಿಯನ್ನು ಗಮನಿಸಲು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯ ಸದಸ್ಯರು ಅತ್ಯುತ್ತಮ ಮೈದಾನ ನಿರ್ಮಾಣಕ್ಕಾಗಿ ಸಲಹೆ ಸೂಚನೆ ನೀಡುತ್ತಿದ್ದಾರೆ.
ಒಟ್ಟಾರೆ ಈ ಭಾಗದ ಹಾಕಿ ಪ್ರೇಮಿಗಳ ಬಹು ವರ್ಷಗಳ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ನಾಲ್ಕೆöÊದು ಬಾರಿ ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಂಸದ ಪ್ರತಾಪ್ ಸಿಂಹ ಅವರೂ ಭೇಟಿ ನೀಡಿ ತಡೆಗೋಡೆಗೆ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿರುವ ಇತರ ಸಿಂಥೆಟಿಕ್ ಟರ್ಫ್ ಮೈದಾನಗಳಿಗಿಂತಲೂ ದೊಡ್ಡದಾದ ಮೈದಾನ ಸೋಮವಾರಪೇಟೆಯಲ್ಲಿ ನಿರ್ಮಾಣವಾಗುತ್ತಿದ್ದು, ಅಂತರರಾಷ್ಟಿçÃಯ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಅಭಿಯಂತರರು ತಿಳಿಸಿದ್ದಾರೆ.
-ವಿಜಯ್ ಹಾನಗಲ್