ಸೋಮವಾರಪೇಟೆ, ಜ. ೨೦: ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಹಾಗೂ ಬೆಟ್ಟದಳ್ಳಿಯ ಮಾನವತಾ ಯುವಕ ಸಂಘದ ವತಿಯಿಂದ ಸಿದ್ದಾರ್ಥ ನಗರದಲ್ಲಿ ರಾಷ್ಟಿçÃಯ ಯುವ ಸಪ್ತಾಹದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸಿದ್ದಾರ್ಥ ನಗರದ ಸಮುದಾಯ ಭವನದ ಸುತ್ತಮುತ್ತ ಹಾಗೂ ಗ್ರಾಮದ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಈ. ಜಯೇಂದ್ರ, ಕೊಡಗು ನೆಹರು ಯುವ ಕೇಂದ್ರದ ರಾಷ್ಟಿçÃಯ ಯುವ ಕಾರ್ಯಕರ್ತ ಕೆ.ಕೆ. ಲಕ್ಷಿö್ಮಕಾಂತ್, ಯುವಕ ಸಂಘದ ಅಧ್ಯಕ್ಷ ಬಿ.ಕೆ. ನವೀನ್, ಕಾರ್ಯದರ್ಶಿ ಪುನೀತ್ ಸೇರಿದಂತೆ ಯುವಕ ಸಂಘದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.