ಗೋಣಿಕೊಪ್ಪ ವರದಿ, ಜ. ೨೦: ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಸಸ್ಯಾಭಿವೃದ್ಧಿ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಆಂಥೋರಿಯA ಸಸ್ಯಾಭಿವೃದ್ಧಿಯ ಬಗ್ಗೆ ಯುವ ವಿಜ್ಞಾನಿ ಕಾವೇರಮ್ಮ ಮಾಹಿತಿ ನೀಡಿದರು.
ವಿವಿಧ ಮೂಲಗಳಿಂದ ಗಾಳಿಯಲ್ಲಿ ಸೇರಿಕೊಳ್ಳುವ ಫಾರ್ಮಲೆಡಿಹೈಡ್, ಅಮೋನಿಕಾ, ಟೋಲ್ಯೂನ್, ಕ್ಸೆöÊನ್ ಅಂತಹ ರಾಸಾಯನಿಕಗಳನ್ನು ತಟಸ್ಥಗೊಳಿಸುವಂತಹ ಸಾಮರ್ಥ್ಯವನ್ನು ಆಥೋರಿಯಂ ಗಿಡ ಹೊಂದಿದೆ. ಆದ್ದರಿಂದ ಇದು ಏರ್ ಫಿಲ್ಟರ್ ಪ್ಲಾಂಟ್ ಎನಿಸಿಕೊಂಡಿದೆ. ವೈವಿಧ್ಯ ಬಣ್ಣದ ಹೂವುಗಳಿಂದ ಉತ್ತಮ ಒಳಾಂಗಣ ಸಸಿಯಾಗಿ ಬೇಡಿಕೆ ಹೆಚ್ಚಿಸಿಕೊಂಡಿದೆ. ಇದರಿಂದ ಸ್ವಾವಲಂಭಿ ಜೀವನಕ್ಕೂ ನಾಂದಿಯಾಗಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಜೀವಾಮೃತ ತಯಾರಿಸುವ ವಿಧಾನ, ತಯಾರಿಕೆಯಲ್ಲಿ ಬಳಸುವ ವಸ್ತುಗಳ ಮಹತ್ವ ಹಾಗೂ ಯಾವ ಪ್ರಮಾಣದಲ್ಲಿ ಉಪಯೋಗಿ ಸಬೇಕೆಂದು ತಿಳಿಸಿದರು. ಉಷ್ಣತೆ, ನೆರಳು, ತಳಿಗಳು, ಅಲಂಕೃತ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕೆವಿಕೆ ವಿಜ್ಞಾನಿ ಡಾ. ಪ್ರಭಾಕರ್ ಇದ್ದರು.