ಮಡಿಕೇರಿ, ಜ. ೨೦: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆಯಲ್ಲಿ ವಿಶ್ವಕೋಶ ರಚನೆ ಮಾಡುವ ಬಗ್ಗೆ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಅಧ್ಯಕ್ಷತೆಯಲ್ಲಿ ತಾ. ೨೪ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಕೊಡಗು ಗೌಡ ಸಮಾಜದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು, ಆಸಕ್ತರು/ ಲೇಖಕರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವಂತೆ ಅಕಾಡೆಮಿ ರಿಜಿಸ್ಟಾçರ್ ಅವರು ಕೋರಿದ್ದಾರೆ.