ಗೋಣಿಕೊಪ್ಪಲು, ಜ.೨೦: ಮೊಬೈಲ್ ಮೂಲಕ ಲಾಟರಿ ಟಿಕೆಟ್‌ನ ಕೊನೆಯ ಮೂರು ಅಂಕಿಗಳ ಮೇಲೆ ಇಂತಿಷ್ಟು ಮೊತ್ತದ ಹಣವನ್ನು ಇಟ್ಟು ಆಟವಾಡುವ ಮೂಲಕ ಅಕ್ರಮವಾಗಿ ಹಣ ಮಾಡುತ್ತಿದ್ದ ಯುವಕರನ್ನು ಬಂಧಿಸುವಲ್ಲಿ ಗೋಣಿಕೊಪ್ಪಲುವಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಲ್ಲಿನ ಪೊಲೀಸರು ಇಂತಹ ಅಕ್ರಮ ಲಾಟರಿ ಏಜೆಂಟ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಅವರಿಂದ ನಗದು ಸೇರಿದಂತೆ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ದಸ್ತಗಿರಿ ಮಾಡಿದ್ದರು.ಇದರಿಂದ ಎಚ್ಚೆತ್ತುಕೊಂಡ ಕೆಲ ಗೋಣಿಕೊಪ್ಪಲು, ಜ.೨೦: ಮೊಬೈಲ್ ಮೂಲಕ ಲಾಟರಿ ಟಿಕೆಟ್‌ನ ಕೊನೆಯ ಮೂರು ಅಂಕಿಗಳ ಮೇಲೆ ಇಂತಿಷ್ಟು ಮೊತ್ತದ ಹಣವನ್ನು ಇಟ್ಟು ಆಟವಾಡುವ ಮೂಲಕ ಅಕ್ರಮವಾಗಿ ಹಣ ಮಾಡುತ್ತಿದ್ದ ಯುವಕರನ್ನು ಬಂಧಿಸುವಲ್ಲಿ ಗೋಣಿಕೊಪ್ಪಲುವಿನ ಪೊಲೀಸರು ಯಶಸ್ವಿಯಾಗಿದ್ದಾರೆ.ಕಳೆದ ಕೆಲವು ದಿನಗಳಿಂದ ಇಲ್ಲಿನ ಪೊಲೀಸರು ಇಂತಹ ಅಕ್ರಮ ಲಾಟರಿ ಏಜೆಂಟ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಅವರಿಂದ ನಗದು ಸೇರಿದಂತೆ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ದಸ್ತಗಿರಿ ಮಾಡಿದ್ದರು.ಇದರಿಂದ ಎಚ್ಚೆತ್ತುಕೊಂಡ ಕೆಲ ಯುವಕರುಗಳಾದ ಕೆ.ಆರ್.ಜಗದೀಶ್, ಬಿ.ಮಹೇಶ್, ಸಿ.ನವೀನ್, ಶಕೀರ್ ಹಾಗೂ ಗುರು ಎಂಬವರುಗಳು ಸಿಕ್ಕಿಬಿದ್ದಿದ್ದಾರೆ.ಆರೋಪಿಗಳಿಂದ ನಗದು ಸೇರಿದಂತೆ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಪ್ರತಿದಿನ ಸಂಜೆ ಮೂರು ಗಂಟೆಯ ನಂತರ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳ

(ಮೊದಲ ಪುಟದಿಂದ) ಫಲಿತಾಂಶಗಳು ಹೊರಬೀಳುತ್ತಿಂದತೆಯೆ ಟಿಕೆಟ್‌ನ ಫಲಿತಾಂಶಗಳ ಕೊನೆಯ ಮೂರು ಅಂಕಿಗಳ ಆಧಾರದಲ್ಲಿ ಹಣವನ್ನು ಇಟ್ಟು ಆಟವಾಡುತ್ತಿರುವುದಾಗಿ ಪೊಲೀಸರ ಮುಂದೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಈ ಭಾಗದಲ್ಲಿ ಅನೇಕ ಯುವಕರು ಪ್ರತಿದಿನ ಕೂಲಿ ಕೆಲಸ ಮುಗಿಸಿ ಬಂದ ಹಣದಿಂದ ಇಂತಹ ಆಟವಾಡಿ ಹಣವನ್ನು ಕಳೆದುಕೊಂಡು ಬರಿಗೈಯಲ್ಲಿ ಮನೆಗೆ ತೆರಳುತ್ತಿರುವುದಾಗಿ ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸರ್ಕಲ್ ಇನ್ಸ್ಪೆಕ್ಟರ್ ರಾಮರೆಡ್ಡಿ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್.ಐ. ಸುಬ್ಬಯ್ಯ, ಮಂಚಯ್ಯ, ಎ.ಎಸ್.ಐ.ಸುಬ್ರಮಣಿ, ಪೊಲೀಸ್ ಸಿಬ್ಬಂದಿಗಳಾದ ಕೃಷ್ಣ, ಅಲಿ, ಮಣಿಕಂಠ, ಟಿ.ಎನ್.ಶೇಖರ್ ಮುಂತಾದವರು ಪಾಲ್ಗೊಂಡಿದ್ದರು. - ಹೆಚ್.ಕೆ.ಜಗದೀಶ್