ಮಡಿಕೇರಿ, ಜ. ೨೦: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಪ್ರಕಾಶ್ ಬಡವನಹಳ್ಳಿ ಗೆಳೆಯರ ವತಿಯಿಂದ ಡಾ. ಪ್ರಕಾಶ್ ಬಡವನಹಳ್ಳಿ ನುಡಿನಮನ ಕಾರ್ಯಕ್ರಮ ತಾ. ೨೪ ರಂದು ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್‌ನ ಸುವರ್ಣ ಮಹೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಎಂ.ಪಿ. ಕೇಶವ್ ಕಾಮತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಎಂ.ಪಿ. ಕೇಶವ್‌ಕಾಮತ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ಪ್ರೊ. ರಹಮತ್ ತರೀಕೆರೆ, ಎಸ್.ಜಿ. ಸಿದ್ದರಾಮಯ್ಯ, ಪ್ರೊ. ರಾಜಪ್ಪ ದಳವಾಯಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ವೇದಿಕೆಯಲ್ಲಿ ಡಾ. ಸುಕನ್ಯಾ ಪ್ರಕಾಶ್, ಬಿ.ಎಸ್. ಲೋಕೇಶ್ ಸಾಗರ್, ಡಾ. ಡಿ. ದೇವರಾಜ್, ಡಾ. ಹೆಚ್.ಆರ್. ಸ್ವಾಮಿ, ಡಾ. ಜಿ.ವಿ. ಆನಂದಮೂರ್ತಿ, ಭಾರಧ್ವಾಜ್ ಕೆ. ಆನಂದತೀರ್ಥ ಇತರರು ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್, ಖಜಾಂಚಿ ಮುನೀರ್ ಅಹಮದ್, ಪ್ರಮುಖರಾದ ವಿಲ್ಫೆçಡ್ ಕ್ರಾಸ್ತಾ, ಬೇಬಿ ಮ್ಯಾಥ್ಯು, ತುಳಸಿ ಮೋಹನ್ ಇದ್ದರು.