ಮಡಿಕೇರಿ, ಜ. ೨೦: ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ನಡೆಯುವ ಆಕರ್ಷಕ ಮೆರವಣಿಗೆಯಲ್ಲಿ ಭಾರತೀಯ ವಾಯುಸೇನೆಯ ತಂಡವನ್ನು ದಕ್ಷಿಣ ಕೊಡಗಿನ ಟಿ ಶೆಟ್ಟಿಗೇರಿಯವರಾದ ಪ್ರಸ್ತುತ ವಾಯು ಸೇನೆಯಲ್ಲಿ ಫ್ಲೆöÊಯಿಂಗ್ ಆಫಿಸರ್ ಆಗಿ ಸೇವೆ ಸಲ್ಲಿಸುತ್ತಿರುವ ಕರ್ನಂಡ ಮನೋಜ್ ಕುಟ್ಟಪ್ಪ ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ ವಾಯುಸೇನೆಯ ತಂಡದ ಮೊದಲ ಸಾಲಿನ ಮೂರು ಮಂದಿಯಲ್ಲಿ ಎಡಗಡೆಯವರಾಗಿ ಭಾಗವಹಿಸಲು ಸ್ಥಾನ ಪಡೆದುಕೊಂಡಿರುವ ಕರ್ನಂಡ ಮನೋಜ್ ಕುಟ್ಟಪ್ಪ ಮಡಿಕೇರಿಯ ಜವಾಹರ್ ನವೋದಯದ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನ ರೇವಾ ಇಂಜಿನಿಯರಿAಗ್ ಕಾಲೇಜಿನಲ್ಲಿ ಎಲೆಕ್ಟಾçನಿಕ್ ಪದವಿದರ ಕೂಡ ಆಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ವಾಯುಸೇನೆಗೆ ಸೇರ್ಪಡೆಯಾದ ಇವರು ಬಹಳ ಕಡಿಮೆ ಅವಧಿಯಲ್ಲಿಯೇ ಈ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಇವರು ದಕ್ಷಿಣ ಕೊಡಗಿನ ಟಿ ಶೆಟ್ಟಿಗೇರಿಯ ಕರ್ನಂಡ ಮಣಿ ಕುಶಾಲಪ್ಪ ಹಾಗೂ ತುಳಸಿ ಅವರ (ತಾಮನೆ: ಕೋಳೇರ) ಪುತ್ರ.