ಹೊದ್ದೂರು, ಜ. ೨೦: ಬೆಳೆಗಾರಿಗೆ ಸಂಕಟದ ಮೇಲೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ನಿರಂತರ ಅತಿವೃಷ್ಠಿ-ನಿರಂತರ ವನ್ಯಮೃಗಗಳ ಕಾಟ, ಅದರ ನಡುವೆ ಕೊಡಗಿನ ಬಹುತೇಕ ಬೆಳೆಗಾರರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗಿದೆ.
ಅರಣ್ಯದಿಂದ ಕಾಫಿ ತೋಟಗಳತ್ತ ಮುಖ ಮಾಡುತ್ತಿರುವ ಕಾಡಾನೆಗಳು, ಹುಲಿಗಳು, ಚಿರತೆಗಳು, ಕಾಡುಕೋಣಗಳು ಸೇರಿದಂತೆ ವಿವಿಧ ವನ್ಯ ಮೃಗಗಳಿಗೆ ಹಲವಾರು ವರ್ಷಗಳಿಂದ ಬೆಳೆದ ಫಸಲು ಮಾತ್ರವಲ್ಲ, ಗಿಡ-ಮರಗಳು ಬಲಿಯಾಗುತ್ತಿವೆ. ಈ ಸಾಲಿಗೆ ಮಂಗಗಳ ಕಾಟ ಮತ್ತೊಂದು ಸೇರ್ಪಡೆ !
ಬಲಿಯಾಗುತ್ತಿರುವ ಬೆಳೆಗಳು
ಮೂರ್ನಾಡು ಸನಿಹದ ಹೊದ್ದೂರು-ಕುಂಬಳದಾಳು ಗ್ರಾಮಗಳಲ್ಲಿ ಕಳೆದ ಕೆಲ ವರ್ಷಗಳಿಂದ ಮಂಗಗಳ ಕಾಟದಿಂದ ಬೆಳೆಗಾರರು ರೋಸಿ ಹೋಗಿದ್ದಾರೆ. ಈ ಭಾಗದಲ್ಲಿ ಬಾಳೆ, ಮಾವು-ಹಲಸು, ಕಾಫಿ, ಕಿತ್ತಳೆ, ಕಾಳುಮೆಣಸು ಸೇರಿದಂತೆ ಬಹುತೇಕ ಬೆಳೆಗಳು ಮಂಗಗಳ ಕಾಟಕ್ಕೆ ತುತ್ತಾಗುತ್ತಿವೆ.
ಕೆಲ ಬೆಳೆಗಾರರು ಬೆಳೆದ ಬಾಳೆ ಸಂಪೂರ್ಣ ಕೋತಿಗಳ ಪಾಲಾಗುತ್ತಿದೆ. ಒಂದೊAದು ಹಿಂಡಿನಲ್ಲಿ ಸುಮಾರು ೧೦೦ಕ್ಕೂ ಅಧಿಕ ಕೋತಿಗಳಿವೆ. ಇವುಗಳ ಹಿಂಡು ತೋಟಕ್ಕೆ ದಾಂಗುಡಿ ಇಟ್ಟಲ್ಲಿ ಕಾಫಿ ಗಿಡಗಳ ಕೊಂಬೆಗಳನ್ನೇ ಮುರಿದು ಮರವೇರುತ್ತಿವೆ. ಕಾಫಿಯನ್ನು ತಿಂದು ನಷ್ಟ ಮಾಡುತ್ತಿವೆ. ಇವುಗಳ ಬೆಳೆಯನ್ನು ಆರಿಸುವುದೇ ಸಮಸ್ಯೆಯಾಗಿದೆ.
ಸತತವಾಗಿ ವಾನರ ಸೇನೆಯು ಮರಗಳನ್ನು ಏರಿಳಿಯುತ್ತವೆ. ಪರಿಣಾಮ ಅವುಗಳಿಗೆ ಹಬ್ಬಿಸಲಾದ ಕಾಳುಮೆಣಸಿನ ಬಳ್ಳಿಗಳು ಧರಾಶಾಹಿಯಾಗುತ್ತಿವೆ. ಬಳ್ಳಿಗಳಲ್ಲಿರುವ ಮೆಣಸಿನ ಗೊಂಚಲು ಬೀಳುತ್ತಿವೆ. ಬಳ್ಳಿಗಳನ್ನು ಮರವೇರಲು ಮಂಗಗಳು ಬಿಡುತ್ತಿಲ್ಲ. ಕೋತಿಗಳ ಆಟವು ಬೆಳೆಗಾರರಿಗೆ ಪ್ರಾಣ ಸಂಕಟವಾಗಿದೆ.
ಕ್ಯಾರೆ ಎನ್ನದ ಕೋತಿಗಳ ಹಿಂಡು !
ಇದರ ಉಪಟಳದಿಂದ ಗಿಡಗಳನ್ನು ರಕ್ಷಿಸಿಸಲು ಹಲವರು ತೋಟದ ಮನೆಗಳಲ್ಲಿ ಹಲವು ನಾಯಿಗಳನ್ನು ಸಾಕುತ್ತಿದ್ದಾರೆ. ಮತ್ತೆ ಕೆಲವರು ನಿರಂತರವಾಗಿ ಪಟಾಕಿ ಸಿಡಿಸಿ, ಕೋತಿಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ.
ಇದಕ್ಕೂ ಕೋತಿಗಳು ಕ್ಯಾರೆ ಅನ್ನುತ್ತಿಲ್ಲ. ಕೆಲವರು ತಮ್ಮ ತೋಟಗಳಲ್ಲಿ “ಗ್ರೀಸ್” ಹಚ್ಚಿದ ಹಲವಾರು ಡಬ್ಬಗಳನ್ನು ತೂಗು ಬಿಟ್ಟಿದ್ದಾರಂತೆ ! ಇದರ