ಗೋಣಿಕೊಪ್ಪಲು, ಜ. ೧೯: ಜಿಲ್ಲೆಯಲ್ಲಿ ಜನವರಿ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆ, ಮೋಡ ಮಿಶ್ರಿತ ವಾತಾವರಣ ಕಾಫಿ ಬೆಳೆಗಾರರನ್ನು ಕಂಗೆಡಿಸಿದೆ. ಕಾಫಿ ಕುಯಿಲಿನ ಸಮಯವಾದ್ದರಿಂದ ಕಾಫಿ ಒಣಗಲು ಬಿಸಿಲಿನ ತಾಪಮಾನವಿಲ್ಲದಂತಾಗಿದೆ.

ಕೆಲವು ದಿನ ಸುರಿದ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಕಾಫಿ ಹಣ್ಣುಗಳಿರುವಾಗಲೇ ಹೂವು ಅರಳಿದೆ. ಮುಂದಿನ ವರ್ಷದ ಕಾಫಿ ಫಸಲಿಗೂ ಬಾರಿ ಹಾನಿಯಾಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೆ ನಂಬಿಕೊAಡಿರುವ ಬೆಳೆಗಾರನ ಪರಿಸ್ಥಿತಿ ಗಂಭೀರವಾಗಿದೆ ಎಂದು ಸಮಾಜ ಸೇವಕ ಕಾಫಿ ಬೆಳೆಗಾರ ಸಂಕೇತ್ ಪೂವಯ್ಯ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊAಡರು.

ಬೆಳೆದ ಭತ್ತ ಗದ್ದೆಯಲ್ಲಿ ನೀರು ಪಾಲಾದರೆ ಇತ್ತ ತೋಟದಲ್ಲಿ ಕಾಫಿ ಹಣ್ಣು ಮಳೆಯ ರಭಸಕ್ಕೆ ರಾಶಿಯಾಗಿ ಸುರಿದು ಕೊಳೆಯುತ್ತಿವೆ, ಬಿಸಿಲಿಲ್ಲದೆ ಕಣದಲ್ಲಿ ಒಣಗಲು ಹಾಕಿದ ಕಾಫಿ ಮುಗ್ಗಲು ಹಿಡಿಯುತ್ತಿದೆ. ಸಣ್ಣಸಣ್ಣ ಹಿಡುವಳಿ ಹೊಂದಿದ ರೈತರ ಪಾಲಿಗಂತೂ ಈ ವರ್ಷ ನರಕಸದೃಶವಾಗಿದೆ. ಕಾಫಿ ಹಾಗೂ ಭತ್ತ ಬೆಳೆಗಾರರ ಪರವಾಗಿ ಪಕ್ಷಾತೀತವಾಗಿ ಹೋರಾಟಗಳು ಆರಂಭವಾಗಬೇಕು. ಶಾಸಕ ಹಾಗೂ ಸಂಸದರು ಈ ಬಗ್ಗೆ ವಿಶೇಷ ಗಮನ ಹರಿಸಿ ಕಾಫಿ ಬೆಳೆಗಾರರ ನೋವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಕೊಡಗು, ಚಿಕ್ಕಮಂಗಳೂರು, ಹಾಸನದ ಸಕಲೇಶಪುರ ಮಳೆಗಾಲದಲ್ಲಿ ವಿಪರೀತ ಹೊಡೆತವನ್ನು ಅನುಭವಿಸಿವೆ.

ಇಲ್ಲಿನ ಪ್ರಮುಖ ಬೆಳೆಯಾದ ಕಾಫಿಯನ್ನು ವಾಣಿಜ್ಯ ಬೆಳೆಗಳ ಪಟ್ಟಿಗೆ ಸೇರಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿ ಕೇಂದ್ರದ ವಾಣಿಜ್ಯ ಮಂತ್ರಾಲಯಕ್ಕೆ ಸಂಬAಧಪಟ್ಟಿದೆ. ಆದರೆ ಈ ಮೂರು ವರ್ಷಗಳಲ್ಲಿ ಕೇಂದ್ರದ ಈ ಸಚಿವಾಲಯದಿಂದ ಕಾಫಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ ನಿದರ್ಶನ ಕಂಡುಬರುತ್ತಿಲ್ಲ ಎಂದರು.

ರೈತರು ಪಡೆದಿರುವ ಕೃಷಿ ಸಾಲ, ಬೆಳೆ ಸಾಲಗಳನ್ನು ಮಾರ್ಚ್ ಅಂತ್ಯದಲ್ಲಿ ಮರುಪಾವತಿ ಮಾಡಲು, ಬ್ಯಾಂಕ್‌ನಿAದ ಸಹಜವಾಗಿ ಒತ್ತಡಗಳು ಆರಂಭವಾಗುತ್ತವೆ. ಇದರಿಂದ ರೈತನಿಗೆ ಪಡೆದ ಸಾಲವನ್ನು, ಬಡ್ಡಿಯನ್ನು ಮರುಪಾವತಿಸಲು ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ನಾಯಕರುಗಳು ಒಕ್ಕೋರಲಿನಿಂದ ತೀರ್ಮಾನ ಕೈಗೊಂಡು ಬೆಳೆಗಾರನ ಬಡ್ಡಿ ಮನ್ನಾ, ಸಾಲ ಮರುಪಾವತಿಗೆ ಅವಧಿ ವಿಸ್ತರಣೆ ಬಗ್ಗೆ ಹೋರಾಟವಾಗಬೇಕು. ಇಲ್ಲದಿದ್ದಲ್ಲಿ ರೈತರುÀ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾದರೂ ಅಚ್ಚರಿ ಇಲ್ಲ ಎಂದು ಮುನ್ನೆಚ್ಚರಿಕೆಯಿತ್ತರು.