ಸೋಮವಾರಪೇಟೆ, ಜ. ೧೯: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಯಡವನಾಡು ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಕೆ. ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯದಹಳ್ಳ ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ ಜಿ.ಪಿ. ಕವಿತ ಆಯ್ಕೆಯಾದರು.

ಇಲ್ಲಿನ ಬಿ.ಆರ್.ಸಿ. ಕಚೇರಿ ಸಭಾಂಗಣದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್. ಮಂಜುನಾಥ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಎಸ್.ಎ. ಯೋಗೇಶ್, ಎಲ್.ಎಂ. ಪ್ರೇಮಾ, ಎಸ್.ಎಂ. ರವಿ (ಖಜಾಂಚಿ), ಕರುಂಬಯ್ಯ (ಜಿಲ್ಲಾ ಉಪಾಧ್ಯಕ್ಷ), ಎಸ್.ಕೆ. ಸೌಭಾಗ್ಯ (ಜಿಲ್ಲಾ ಸಹ ಕಾರ್ಯದರ್ಶಿ), ಎಸ್.ಎಸ್. ಚೇತನ್ (ರಾಜ್ಯ ಸಹ ಕಾರ್ಯದರ್ಶಿ), ನಿರ್ದೇಶಕರುಗಳಾಗಿ ಉಮಾದೇವಿ, ಪ್ರಸನ್ನಕುಮಾರ್, ಟಿ.ಎಸ್. ಚಂದ್ರಶೇಖರ್, ಸಿ.ಆರ್. ತಂಗಮ್ಮ, ಸುರೇಶ್ ಕುಮಾರ್, ಬಿಬಿನ್ ಕುಮಾರ್, ಎಸ್.ಎಂ. ಆಶಾ ಆಯ್ಕೆಯಾದರು. ಇದೇ ಸಂದರ್ಭ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.