ಶ್ರೀಮಂಗಲ, ಜ. ೧೯: ಒತ್ತುವರಿ ಮಾಡಿಕೊಂಡು ರೈತರ ಸ್ವಾದೀನ ದಲ್ಲಿರುವ ಕೃಷಿ ಜಮೀನನ್ನು ಅಕ್ರಮ-ಸಕ್ರಮ ಸಮಿತಿಯ ಮೂಲಕ ಮಂಜೂರು ಮಾಡಿಕೊಳ್ಳಲು ಫಾರಂ ನಂ. ೫೭ರಡಿಯಲ್ಲಿ ಅರ್ಜಿಸಲ್ಲಿಸಿರುವ ಅರ್ಜಿದಾರರ ಜಾಗವನ್ನು ಸರ್ವೆ ಮಾಡಿ ಮಂಜೂರು ಮಾಡಲು ತಹಶೀಲ್ದಾರರು, ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ವೀರಾಜಪೇಟೆ ಶ್ರೀಮಂಗಲ, ಜ. ೧೯: ಒತ್ತುವರಿ ಮಾಡಿಕೊಂಡು ರೈತರ ಸ್ವಾದೀನ ದಲ್ಲಿರುವ ಕೃಷಿ ಜಮೀನನ್ನು ಅಕ್ರಮ-ಸಕ್ರಮ ಸಮಿತಿಯ ಮೂಲಕ ಮಂಜೂರು ಮಾಡಿಕೊಳ್ಳಲು ಫಾರಂ ನಂ. ೫೭ರಡಿಯಲ್ಲಿ ಅರ್ಜಿಸಲ್ಲಿಸಿರುವ ಅರ್ಜಿದಾರರ ಜಾಗವನ್ನು ಸರ್ವೆ ಮಾಡಿ ಮಂಜೂರು ಮಾಡಲು ತಹಶೀಲ್ದಾರರು, ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ವೀರಾಜಪೇಟೆ ಶ್ರೀಮಂಗಲ, ಜ. ೧೯: ಒತ್ತುವರಿ ಮಾಡಿಕೊಂಡು ರೈತರ ಸ್ವಾದೀನ ದಲ್ಲಿರುವ ಕೃಷಿ ಜಮೀನನ್ನು ಅಕ್ರಮ-ಸಕ್ರಮ ಸಮಿತಿಯ ಮೂಲಕ ಮಂಜೂರು ಮಾಡಿಕೊಳ್ಳಲು ಫಾರಂ ನಂ. ೫೭ರಡಿಯಲ್ಲಿ ಅರ್ಜಿಸಲ್ಲಿಸಿರುವ ಅರ್ಜಿದಾರರ ಜಾಗವನ್ನು ಸರ್ವೆ ಮಾಡಿ ಮಂಜೂರು ಮಾಡಲು ತಹಶೀಲ್ದಾರರು, ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ವೀರಾಜಪೇಟೆ ಹುದಿಕೇರಿ ಹೋಬಳಿ ಅಕ್ರಮ-ಸಕ್ರಮ ಅರ್ಜಿದಾರರ ಅಹವಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊದಲು ಒತ್ತುವರಿಯಾದ ಜಾಗವನ್ನು ಸಮಿತಿಯಿಂದ ಖುದ್ದು ಪರಿಶೀಲಿಸಿ ಮಂಜೂರಾತಿಗೆ ಪರಿಶೀಲಿಸ ಲಾಗುತ್ತಿತ್ತ್ತು. ಆದರೆ ಪ್ರಸಕ್ತ ಸಮಿತಿಯಲ್ಲಿ ಸರ್ವೆ ನಡೆಸಿದ ನಂತರ ಜಾಗವನ್ನು ಮಂಜೂರಾತಿ ಮಾಡುವ ನಿಟ್ಟಿನಲ್ಲಿ ಕಡತವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
(ಮೊದಲ ಪುಟದಿಂದ) ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಿ ಸ್ವಾಧೀನ ಪಡಿಸಿಕೊಂಡಿರುವ ಜಾಗದ ಮಂಜೂರಾತಿಗಾಗಿ ಶ್ರೀಮಂಗಲ ಹೋಬಳಿ ೫೦೫, ಹುದಿಕೇರಿ ಹೋಬಳಿಯ ೨೩೯ ಸೇರಿ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಸುಮಾರು ೨ ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ ಎಂದು ತಿಳಿಸಿದರು.
ಎರಡು ತಾಲೂಕಿನ ಈ ಅರ್ಜಿಗಳನ್ನು ಪ್ರತಿ ತಿಂಗಳ ತಾ. ೨೮ರಂದು ಸಮಿತಿಯ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಅಕ್ರಮ-ಸಕ್ರಮ ಸಮಿತಿಯ ಕಾರ್ಯದರ್ಶಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗನಂದಾ ಮಾತನಾಡಿ, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ವ್ಯವಸಾಯ ಮಾಡಿಕೊಂಡು ಬಂದಿರುವ ಜಮೀನನ್ನು ತಮ್ಮ ಹೆಸರಿಗೆ ದಾಖಲೆ ಮಾಡಿಕೊಡುವ ಉದ್ದೇಶದಿಂದ ಗೊಂದಲಗಳನ್ನು ವಿವರಿಸಲು ಈ ಸಭೆಯನ್ನು ಸಮಿತಿಯ ಅಧ್ಯಕ್ಷರು ಕರೆದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ರೈತರಿಗೆ ಅನ್ಯಾಯವಾಗದಂತೆ ಅಧ್ಯಕ್ಷರ ನೇತೃತ್ವದಲ್ಲಿ ಅಕ್ರಮ ಸಕ್ರಮ ಸಮಿತಿಯಲ್ಲಿ ಜಾಗ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಫಾರಂ. ನಂ. ೫೦ರಲ್ಲಿ ಜಾಗ ಮಂಜೂರಾತಿಗೆ ಸಲ್ಲಿಸಿರುವ ಅರ್ಜಿ ಎಲ್ಲಾ ಇತ್ಯರ್ಥವಾಗಿದೆ. ಫಾರಂ ನಂ. ೫೩ರಲ್ಲಿ ಸಲ್ಲಿಸಿರುವ ೧೬ ಅರ್ಜಿಗಳು ಪ್ರಗತಿಯಲ್ಲಿವೆ. ಉಳಿದಂತೆ ೫೭ರಲ್ಲಿ ಸಲ್ಲಿಸಿರುವ ೨ ಸಾವಿರ ಅರ್ಜಿಗಳು ಮಂಜೂರಾತಿಗೆ ಬಾಕಿ ಇದೆ ಎಂದು ತಿಳಿಸಿದರು.
ಬೆಳೆಗಾರ ಕಟ್ಟೇರ ಈಶ್ವರ ಜಮೀನು ಇರುವವರಿಗೆ ಅಕ್ರಮ ಸಕ್ರಮದಡಿ ಜಾಗ ಮಂಜೂರಾತಿ ಸಾಧ್ಯವಿಲ್ಲ ಎಂಬ ತಹಶೀಲ್ದಾರರ ಹೇಳಿಕೆಯ ಬಗ್ಗೆ ಪ್ರಸ್ತಾಪಿಸಿದರು. ಸರಕಾರದ ನಿಯಮದಂತೆ ೪.೯೫ ಎಕರೆ ಜಾಗ ಮಂಜೂರಾತಿಗೆ ಅವಕಾಶವಿದೆ. ಒಂದುವೇಳೆ ೨ ಎಕರೆ ಜಾಗ ಕುಟುಂಬ ಆಸ್ತಿ ಇದ್ದರೆ ಉಳಿದ ೨.೯೫ ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಸಮಿತಿ ಮೂಲಕ ಮಂಜೂರು ಮಾಡಿಕೊಳ್ಳಲು ಅವಕಾಶವಿದೆ ಎಂದು ಗಮನ ಸೆಳೆದರು.
ವಂಶ ವೃಕ್ಷದಲ್ಲಿ ತಂದೆಗೆ ೫ ಎಕರೆ ಜಾಗವಿದ್ದರೆ ಅವರ ೫ ಪುತ್ರರಿಗೆ ಸಮಾನವಾಗಿ ಹಂಚಿದ ನಂತರ ಅಕ್ರಮ ಸಕ್ರಮದಡಿ ಮತ್ತೆ ೪ ಎಕರೆಯಷ್ಟು ಜಾಗ ಮಂಜೂರಾತಿ ಮಾಡಲು ಅವಕಾಶವಿದ್ದು, ತಂದೆಗೆ ಇರುವ ಜಾಗವನ್ನು ಪರಿಗಣಿಸಿ ಅರ್ಜಿಗಳನ್ನು ತಿರಸ್ಕರಿಸದಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರರು ಸಮಿತಿಯ ಅಧ್ಯಕ್ಷರ ವಿವೇಚನೆಯಂತೆ ಮೇಲಿನ ಎರಡು ವಿಷಯದಲ್ಲಿ ಜಾಗ ಇರುವವರಿಗೆ ೪.೯೫ ಎಕರೆ ಮಿತಿಯಲ್ಲಿ ಜಾಗ ಮಂಜೂರು ಮಾಡಬಹುದಾಗಿದೆ ಎಂದರು. ಫಾರಂ ನಂ. ೫೩ರಲ್ಲಿ ಹಾಕಿದ ಅರ್ಜಿ ತಾಂತ್ರಿಕ ಕಾರಣಗಳಿಂದ ಫಾರಂ. ನಂ. ೫೭ರಲ್ಲಿ ಅರ್ಜಿ ಹಾಕಲು ಸಾಧ್ಯವಾಗದೇ ಇರುವ ಬಗ್ಗೆ ಬೆಳೆಗಾರ ಮಂಡೇಚAಡ ದಿನೇಶ್ ಚಿಟ್ಟಿಯಪ್ಪ ಗಮನ ಸೆಳೆದರು. ಈ ಬಗ್ಗೆ ಸರಕಾರ ಮುಂದಿನ ದಿನಗಳಲ್ಲಿ ಅರ್ಜಿ ಹಾಕಲು ಆದೇಶ ನೀಡಿದಾಗ ಅವಕಾಶ ದೊರೆಯಲಿದೆ ಎಂದರು.
ರೈತ ಸಂಘದ ಅಪ್ಪಚಂಗಡ ಮೋಟಯ್ಯ ಮಾತನಾಡಿ, ಫಾರಂ ನಂ. ೫೩ರಲ್ಲಿ ಜಾಗ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ಬಹಳಷ್ಟು ಅರ್ಜಿದಾರರು ಫಾರಂ. ೫೭ರಲ್ಲಿ ಮತ್ತೆ ಅರ್ಜಿಸಲ್ಲಿಸಲು ಸಾಧ್ಯವಾಗಲಿಲ್ಲ. ಅಂತಹ ಕಡತಗಳನ್ನು ಜಾಗ ಮಂಜೂರಾತಿಗೆ ಪರಿಶೀಲಿಸುವಂತೆ, ತಂದೆಯ ಹೆಸರಿನಲ್ಲಿ ಜಾಗ ಇದ್ದರೆ, ಮಕ್ಕಳಿಗೆ ಜಾಗವಿಲ್ಲದಿದ್ದರೆ ಸಮಿತಿಯ ಮೂಲಕ ಜಾಗ ಮಂಜೂರಾತಿ ಮಾಡುವಂತೆ ಮನವಿ ಮಾಡಿದರು.
ಮಾಜಿ ಸೈನಿಕರು ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಾಗವನ್ನು ವಿಶೇಷ ಪ್ರಕರಣದಡಿ ಅಕ್ರಮ-ಸಕ್ರಮ ಸಮಿತಿಯಲ್ಲಿ ಮಂಜೂರು ಮಾಡಿಕೊಡುವಂತೆ ಸಮಿತಿಯವರಲ್ಲಿ ಕಟ್ಟೇರ ಈಶ್ವರ ಮನವಿ ಮಾಡಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸದಸ್ಯರುಗಳಾದ ಮಾಪಂಗಡ ಯಮುನಾ ಚಂಗಪ್ಪ, ಹೆಚ್.ಕೆ. ದಿನೇಶ್, ತೀತಿಮಾಡ ಲಾಲ ಭೀಮಯ್ಯ, ಶ್ರೀಮಂಗಲ ಹೋಬಳಿ ಉಪತಹಶೀಲ್ದಾರರಾದ ಅಕ್ಕಮ್ಮ, ಶ್ರೀಮಂಗಲ ಕಂದಾಯ ಪರಿವೀಕ್ಷಕ ಸುದೀಂದ್ರಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ದೇವಯ್ಯ, ಪ್ರಶಾಂತ್, ಪೂಣಚ್ಚ, ಬಸವನಗೌಡ, ಹುದಿಕೇರಿ ಹೋಬಳಿ ಕಂದಾಯ ಪರಿವೀಕ್ಷಕ ನಿಶಾನ್, ಗ್ರಾಮ ಲೆಕ್ಕಾಧಿಕಾರಿಗಳಾದ ಜಿ.ಕೆ. ನಿತಿನ್, ಆಶಾ, ಸಂತೋಷ್ ಇದ್ದರು.