ಗೋಣಿಕೊಪ್ಪಲು, ಜ. ೧೯: ಜಿಲ್ಲೆಯಲ್ಲಿ ಜನವರಿ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆ, ಮೋಡ ಮಿಶ್ರಿತ ವಾತಾವರಣ ಕಾಫಿ ಬೆಳೆಗಾರರನ್ನು ಕಂಗೆಡಿಸಿದೆ. ಕಾಫಿ ಕುಯಿಲಿನ ಸಮಯವಾದ್ದರಿಂದ ಕಾಫಿ ಒಣಗಲು ಬಿಸಿಲಿನ ತಾಪಮಾನವಿಲ್ಲದಂತಾಗಿದೆ.

ಕೆಲವು ದಿನ ಸುರಿದ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಕಾಫಿ ಹಣ್ಣುಗಳಿರುವಾಗಲೇ ಹೂವು ಅರಳಿದೆ. ಮುಂದಿನ ವರ್ಷದ ಕಾಫಿ ಫಸಲಿಗೂ ಬಾರಿ ಹಾನಿಯಾಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೆ ನಂಬಿಕೊAಡಿರುವ ಬೆಳೆಗಾರನ ಪರಿಸ್ಥಿತಿ ಗಂಭೀರವಾಗಿದೆ ಎಂದು ಸಮಾಜ ಸೇವಕ ಕಾಫಿ ಬೆಳೆಗಾರ ಸಂಕೇತ್ ಪೂವಯ್ಯ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊAಡರು.

ಬೆಳೆದ ಭತ್ತ ಗದ್ದೆಯಲ್ಲಿ ನೀರು ಪಾಲಾದರೆ ಇತ್ತ ತೋಟದಲ್ಲಿ ಕಾಫಿ ಹಣ್ಣು ಮಳೆಯ ರಭಸಕ್ಕೆ ರಾಶಿಯಾಗಿ ಸುರಿದು ಕೊಳೆಯುತ್ತಿವೆ, ಬಿಸಿಲಿಲ್ಲದೆ ಕಣದಲ್ಲಿ ಒಣಗಲು ಹಾಕಿದ ಕಾಫಿ ಮುಗ್ಗಲು ಹಿಡಿಯುತ್ತಿದೆ. ಸಣ್ಣಸಣ್ಣ ಹಿಡುವಳಿ ಹೊಂದಿದ ರೈತರ ಪಾಲಿಗಂತೂ ಈ ವರ್ಷ ನರಕಸದೃಶವಾಗಿದೆ. ಕಾಫಿ ಹಾಗೂ ಭತ್ತ ಬೆಳೆಗಾರರ ಪರವಾಗಿ ಪಕ್ಷಾತೀತವಾಗಿ ಹೋರಾಟಗಳು ಸಂಕೇತ್ ಪೂವಯ್ಯ

ಗೋಣಿಕೊಪ್ಪಲು, ಜ. ೧೯: ಜಿಲ್ಲೆಯಲ್ಲಿ ಜನವರಿ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆ, ಮೋಡ ಮಿಶ್ರಿತ ವಾತಾವರಣ ಕಾಫಿ ಬೆಳೆಗಾರರನ್ನು ಕಂಗೆಡಿಸಿದೆ. ಕಾಫಿ ಕುಯಿಲಿನ ಸಮಯವಾದ್ದರಿಂದ ಕಾಫಿ ಒಣಗಲು ಬಿಸಿಲಿನ ತಾಪಮಾನವಿಲ್ಲದಂತಾಗಿದೆ.

ಕೆಲವು ದಿನ ಸುರಿದ ಮಳೆಯಿಂದಾಗಿ ಕಾಫಿ ಗಿಡದಲ್ಲಿ ಕಾಫಿ ಹಣ್ಣುಗಳಿರುವಾಗಲೇ ಹೂವು ಅರಳಿದೆ. ಮುಂದಿನ ವರ್ಷದ ಕಾಫಿ ಫಸಲಿಗೂ ಬಾರಿ ಹಾನಿಯಾಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೆ ನಂಬಿಕೊAಡಿರುವ ಬೆಳೆಗಾರನ ಪರಿಸ್ಥಿತಿ ಗಂಭೀರವಾಗಿದೆ ಎಂದು ಸಮಾಜ ಸೇವಕ ಕಾಫಿ ಬೆಳೆಗಾರ ಸಂಕೇತ್ ಪೂವಯ್ಯ ಮಾಧ್ಯಮಗಳೊಂದಿಗೆ ಅಭಿಪ್ರಾಯ ಹಂಚಿಕೊAಡರು.

ಬೆಳೆದ ಭತ್ತ ಗದ್ದೆಯಲ್ಲಿ ನೀರು ಪಾಲಾದರೆ ಇತ್ತ ತೋಟದಲ್ಲಿ ಕಾಫಿ ಹಣ್ಣು ಮಳೆಯ ರಭಸಕ್ಕೆ ರಾಶಿಯಾಗಿ ಸುರಿದು ಕೊಳೆಯುತ್ತಿವೆ, ಬಿಸಿಲಿಲ್ಲದೆ ಕಣದಲ್ಲಿ ಒಣಗಲು ಹಾಕಿದ ಕಾಫಿ ಮುಗ್ಗಲು ಹಿಡಿಯುತ್ತಿದೆ. ಸಣ್ಣಸಣ್ಣ ಹಿಡುವಳಿ ಹೊಂದಿದ ರೈತರ ಪಾಲಿಗಂತೂ ಈ ವರ್ಷ ನರಕಸದೃಶವಾಗಿದೆ. ಕಾಫಿ ಹಾಗೂ ಭತ್ತ ಬೆಳೆಗಾರರ ಪರವಾಗಿ ಪಕ್ಷಾತೀತವಾಗಿ ಹೋರಾಟಗಳು