ಮಡಿಕೇರಿ, ಜ. ೧೯: ತಾ. ೨೫ ರಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನಡೆಯಲಿರುವ ಪ್ರತಿಭಟನೆಗೆ ಚೆರಿಯಪರಂಬು ಪೈಸಾರಿ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯೆ ಶರೀಫ ಹಾಗೂ ಸ್ಥಳೀಯ ನಿವಾಸಿ ದಿಲೇಶ್, ಚೆರಿಯಪರಂಬು ಪೈಸಾರಿಯಲ್ಲಿ ಸೂಕ್ತ ಮೂಲಭೂತ ಸೌಕರ್ಯ ಇಲ್ಲ, ಇಂದಿಗೂ ವಿದ್ಯುತ್ ಇಲ್ಲದೆ ಕತ್ತಲಲ್ಲಿ ವಾಸಿಸುವ ಸ್ಥಿತಿ ಇದೆ. ನಾಪೋಕ್ಲುವಿನತ್ಯಾಜ್ಯವನ್ನು ಚೆರಿಯಪರಂಬು ಮೂಲಕ ಹರಿಯುವ ಕಾವೇರಿ ನದಿ ತಟದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದರು ಯಾವುದೇ ಸ್ಪಂದನೆ ದೊರೆತಿಲ್ಲ. ತಾ. ೨೫ ರಂದು ನಡೆಯುವ ಪ್ರತಿಭಟನೆಗೆ ಸೂಕ್ತ ಸ್ಪಂದನ ದೊರಕದಿದ್ದರೆ ೧೨೫ ಕುಟುಂಬಗಳು ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಆಹೋರಾತ್ರಿ ಹೋರಾಟ ಮಾಡಲಾ ಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ನಿವಾಸಿಗಳಾದ ಪದ್ಮನಾಭ, ಯೋಗೇಶ್, ವಿಜಯ್ ಟಿ.ಆರ್. ಇದ್ದರು.