ಗೋಣಿಕೊಪ್ಪಲು, ಜ. ೧೯: ರೂ. ೨ ಕೋಟಿ ವೆಚ್ಚದಲ್ಲಿ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮತ್ತಿ-ಮೂರ್ನಾಡು ಲಿಂಕ್ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಇಲ್ಲಿನ ಕೊಡವ ಅಸೋಸಿಯೇಷನ್ ಪದಾಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆದರು.

ಇವರ ಮಾಹಿತಿ ತೃಪ್ತಿದಾಯಕ ವಾಗಿಲ್ಲದ ಕಾರಣ ಮುಖಂಡರುಗಳು ಲೋಕೋಪಯೋಗಿ ಇಲಾಖೆಯ ತಾಲೂಕು ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಎಇಇ ಸುರೇಶ್ ಅವರು ಸ್ಥಳಕ್ಕೆ ಆಗಮಿಸಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ವಿವರ ಪಡೆದರು.

ಸರ್ಕಾರ ನೀಡಿರುವ ಅನುದಾನ ದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿ ಸುತ್ತೇವೆ. ಒಂದು ತಿಂಗಳೊಳಗೆ ರಸ್ತೆ ಕಾಮಗಾರಿಯಲ್ಲಿ ಕಳಪೆ ಕಂಡು ಬಂದರೆ ಈ ಬಗ್ಗೆ ಗುತ್ತಿಗೆದಾರರನ್ನು ಹೊಣೆ ಮಾಡುವ ಜವಾಬ್ದಾರಿ ನನ್ನದಾಗಿದೆ. ಗುಣಮಟ್ಟದಿಂದ ಕೆಲಸ ನಿರ್ವಹಿಸಲು ನಾನೇ ಖುದ್ದಾಗಿ ಸ್ಥಳದಲ್ಲಿ ಇರುತ್ತೇನೆಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಇವರ ಭರವಸೆ

ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಆಕ್ಷೇಪ ಹಿಂಪಡೆದು ಗುಣಮಟ್ಟದ ಕಾಮಗಾರಿ ನಡೆಯಬೇಕು ತಪ್ಪಿದ್ದಲ್ಲಿ ಮುಂದಿನ ದಿನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭ ಕೊಡವ ಅಸೋಸಿ ಯೇಷನ್ ಪದಾಧಿಕಾರಿ ಗಳಾದ ಮಚ್ಚಾರಂಡ ಪೂಣಚ್ಚ, ಮಚ್ಚಾರಂಡ ಕಾರ್ಯಪ್ಪ, ದೇವಣಿರ ಅಯ್ಯಪ್ಪ, ಮಂಡೇಪAಡ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಪೇಶ್, ಜೀವನ್ ಮತ್ತಿತ್ತರರು ಹಾಜರಿದ್ದರು.