ಚೆಯ್ಯಂಡಾಣೆ, ಜ. ೧೮: ನರಿಯಂದಡ ಗ್ರಾ.ಪಂ.ವ್ಯಾಪ್ತಿಯ ಚೇಲಾವರ ಗ್ರಾಮಕ್ಕೆ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಭೇಟಿ ನೀಡಿದರು.
ಇತ್ತೀಚಿಗೆ ನಿರ್ಮಿಸಿದ ಅರಣ್ಯ ಇಲಾಖೆಯ ಗೇಟ್‌ನಿಂದ ತುಂಬಾ ತೊಂದರೆಯಾಗುತ್ತಿದ್ದು, ಇದರ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ಗೇಟನ್ನು ತೆರವುಗೊಳಿಸುವಂತೆ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಅರಣ್ಯವನ್ನು ಯಾವ ರೀತಿಯಲ್ಲಿ ಸಂರಕ್ಷಣೆ ಮಾಡಬೇಕು ಎಂಬದರ ಬಗ್ಗೆ ರವಿಕುಶಾಲಪ್ಪ ಮಾಹಿತಿ ನೀಡಿದರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಜಿ.ಪಂ. ಸದಸ್ಯರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮುರುಳಿ ಕರುಂಬಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯೆ ಉಮಾ ಪ್ರಭು, ಮಾಜಿ ಜಿ.ಪಂ. ಉಪಾಧ್ಯಕ್ಷೆ ಉಷಾದೇವಮ್ಮ ಸೇರಿದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.
ಕಾರ್ಯಕ್ರಮದ ಸ್ವಾಗತವನ್ನು ಮುಂಡ್ಯೊಳAಡ ಬಿದ್ದಪ್ಪ ಹಾಗೂ ವಂದನಾರ್ಪಣೆಯನ್ನು ತೋಟಂಬೈಲು ಅನಂತ್ ಕುಮಾರ್ ನಿರ್ವಹಿಸಿದರು.