ಮಡಿಕೇರಿ, ಜ. ೧೭: ಮಂಗಳಾದೇವಿನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ತಾ. ೧೮ ರಂದು (ಇಂದು) ಬೆಳಿಗ್ಗೆ ೬ ಗಂಟೆಯಿAದ ಪುಣ್ಯಾಹ, ಗಣಪತಿ ಹವನ, ಬೆಳಿಗ್ಗೆ ೯.೪೭ ಗಂಟೆಗೆ ಸಲ್ಲುವ ಕುಂಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ೬ ಗಂಟೆಗೆ ಸಾಯಂ ಪೂಜೆ, ೭ ಗಂಟೆಗೆ ರಂಗಪೂಜೆ, ಅಶೋಕಪುರದ ವೆಂಕಟೇಶ್ವರ ಕಲಾ ತಂಡದಿAದ ಭಜನೆ ಸೇವೆ, ೭.೩೦ ಗಂಟೆಗೆ ಉತ್ಸವ ಬಲಿ, ಸಂಪ್ರೋಕ್ಷಣೆ ಹಾಗೂ ಅನ್ನದಾನ ನಡೆಯಲಿದೆ.