ಮಡಿಕೇರಿ, ಜ. ೧೭: ಮಕರ ಸಂಕ್ರಾAತಿ ಹಬ್ಬದ ಅಂಗವಾಗಿ ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಆದಂ ಎಸ್ಟೇಟಿನಲ್ಲಿರುವ ಬೇಟೆ ಅಯ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ವಿಶೇಷ ಪೂಜೆಯೊಂದಿಗೆ ಮಧ್ಯಾಹ್ನ ಮಹಾ ಮಂಗಳಾರತಿ ನೆರವೇರಿತು. ಇದೇ ಸಂದರ್ಭದಲ್ಲಿ ನಾಗದೇವನಿಗೂ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನೆರೆದಿದ್ದ ಭಕ್ತರಿಗೆ ಪ್ರಸಾದದೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯದ ಅರ್ಚಕ ಕೃಷ್ಣ ಅವರು ಪೂಜಾ ಕಾರ್ಯ ನೆರವೇರಿಸಿದರು. ತೋಟದ ವ್ಯವಸ್ಥಾಪಕ ಅಯ್ಯಪ್ಪ, ಅಯ್ಯಕುಟ್ಟಿರ, ತೋರೆರ, ಕುಡೆಕಲ್,ಕುದುಪಜೆ, ಕೋಡಿಯಡ್ಕ, ಕೊಂಬನ ಕುಟುಂಬಸ್ಥರು, ಗ್ರಾಮಸ್ಥರು ಪಾಲ್ಗೊಂಡಿದ್ದರು.