ಸೋಮವಾರಪೇಟೆ,ಜ.೧೮: ಶಾಂತಳ್ಳಿ ಗ್ರಾಮದ ನಿವಾಸಿ, ಹಾಕಿ ಆಟಗಾರಎಸ್.ಎಂ. ಕುಲದೀಪ್(೪೦)ಅವರು ಅನಾರೋಗ್ಯದಿಂದ ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಕಳೆದ ೪ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕುಲದೀಪ್ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

೧೯೯೫-೯೬ರಲ್ಲಿ ಭಾರತ ಕಿರಿಯರ ಹಾಕಿ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ ಕುಲದೀಪ್, ಸಿಂಗಾಪುರದಲ್ಲಿ ನಡೆದ ಅಂರ‍್ರಾಷ್ಟಿçÃಯ ಹಾಕಿ ಕ್ರೀಡಾಕೂಟದಲ್ಲಿ ಏರ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ್ದರು. ಇದರೊಂದಿಗೆ ಅತ್ಯುತ್ತಮ ಹಾಕಿ ಪಟುವಾಗಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು.

ಮೃತರು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ತಾಯಿ ದಾಕ್ಷಾಯಿಣಿ, ಪತ್ನಿ ಅಕ್ಷತಾ, ಈರ್ವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೯ರಂದು (ಇಂದು) ಶಾಂತಳ್ಳಿಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.