ಸೋಮವಾರಪೇಟೆ,ಜ.೧೮: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಗತಿಯಲ್ಲಿರುವ ರೂ. ೪.೧೫ ಕೋಟಿ ವೆಚ್ಚದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಟರ್ಫ್ ಕಾಮಗಾರಿ ಪ್ರಗತಿಯಲ್ಲಿದ್ದು, ಮೈದಾನಆವರಣಕ್ಕೆ ಹೊಂದಿಕೊAಡAತೆ ತಡೆಗೋಡೆಯ ಅವಶ್ಯಕತೆಯಿದೆ. ಸಂಸದರ ನಿಧಿಯಿಂದ ಅನುದಾನ ಒದಗಿಸುವಂತೆ ಕ್ರೀಡಾಂಗಣ ಕಾಮಗಾರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮತ್ತು ಸದಸ್ಯರುಗಳು ಮನವಿ ಮಾಡಿದರು.
ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಸತತ ಹಾಗೂ ಜೂನಿಯರ್ ಕಾಲೇಜು ಪ್ರಯತ್ನದಿಂದ ಸೋಮವಾರಪೇಟೆಯಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣ ವಾಗುತ್ತಿದೆ. ಮೈದಾನಕ್ಕೆ ಅಗತ್ಯವಾಗಿ ತಡೆಗೋಡೆಯ ಅವಶ್ಯಕತೆಯಿದೆ ಎಂದು ಸಂಸದರಿಗೆ ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದರು, ಕೊರೊನಾ ಹಿನ್ನೆಲೆ ಸಂಸದರ ವಿವಿಧ ಯೋಜನೆಗಳಿಗೆ ಸಂಬAಧಿಸಿದAತೆ ಅನುದಾನವನ್ನು ತಡೆಹಿಡಿಯಲಾಗಿದೆ. ಇದೀಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಏಪ್ರಿಲ್ ನಂತರ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಒದಗಿಸುವದಾಗಿ ಭರವಸೆ ನೀಡಿದರು.
ಈ ಸಂದರ್ಭ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳಾದ ಎಸ್.ಮಹೇಶ್, ಬಿ.ಎಂ. ಸುರೇಶ್, ಯಶವಂತ್, ಎಸ್.ಆರ್. ಸೋಮೇಶ್, ಕಿಬ್ಬೆಟ್ಟ ಮಧು, ಅಭಿಷೇಕ್, ಜಗದೀಶ್, ಚೌಡ್ಲು ಗ್ರಾ.ಪಂ. ಸದಸ್ಯ ನತೀಶ್ ಮಂದಣ್ಣ, ಪ್ರಮುಖರಾದ ಶರತ್ಚಂದ್ರ, ನೇಗಳ್ಳೆ ಜೀವನ್ ಸೇರಿದಂತೆ ಉಪಸ್ಥಿತರಿದ್ದರು.