ಮಡಿಕೇರಿ, ಜ. ೧೭: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್ಸಿಸಿ ಘಟಕದ ವತಿಯಿಂದ ತಾ. ೧೮ ರಿಂದ (ಇಂದಿನಿAದ) ತಾ. ೨೨ರವರೆಗೆ ವಾರ್ಷಿಕ ಶಿಬಿರ ಏರ್ಪಡಿಸಲಾಗಿದೆ. ಶಿಬಿರವನ್ನು ತಾ. ೧೮ರಂದು (ಇಂದು) ಬೆಳಿಗ್ಗೆ ೧೦.೩೦ಕ್ಕೆ ಮಡಿಕೇರಿಯ ಎನ್ಸಿಸಿ ಘಟಕದ ಕಮಾಂಡಿAಗ್ ಆಫೀಸರ್ ಕ|| ಚೇತನ್ ಧಿಮಾನ್ ಉದ್ಘಾಟಲಿಸಲಿದ್ದಾರೆ. ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಡಾ|| ಸಿ. ಜಗತ್ ತಿಮ್ಮಯ್ಯ,. ಲೆ||ಕ|| ನವದೀಪ್ ಬೇಡಿ ಉಪಸ್ಥಿತರಿರುವರು.