*ಗೋಣಿಕೊಪ್ಪಲು, ಜ. ೧೭: ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣದಲ್ಲಿ ವಿರಾಟ್ ಕ್ರಿಕೆಟರ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಥಮ ವರ್ಷದ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಹಂತಿಮ ಹಣಾಹಣಿಯಲ್ಲಿ ‘ಟೀಮ್ ಮ್ಯಾಕ್ಸ್ವೆಲ್’ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅರಕಲಗೂಡು ‘ವಿಲೇಜ್ ಹಂಟರ್ಸ್’ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮೊದಲ ೬ ಓವರ್‌ನಲ್ಲಿ ಟೀಮ್ ಮ್ಯಾಕ್ಸ್ವೆಲ್ ತಂಡವು ಒಟ್ಟು ೮೧ ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ತಂಡದ ನಾಯಕ ಮಾದಾಪುರದ ಸಂತೋಷ್ ಬಾರಿಸಿದ ಸಿಕ್ಸರ್‌ಗಳಿಂದ ವೈಯಕ್ತಿಕವಾಗಿ ೬೫ ರನ್ ತಂಡಕ್ಕೆ ಒದಗಿಸಿ ಪಂದ್ಯ ಶ್ರೇಷ್ಟ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಎದುರಾಳಿ ಅರಕಲಗೂಡು ವಿಲೇಜ್ ಹಂಟರ್ಸ್ ತಂಡ ನಿಗದಿತ ೬ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ಕೇವಲ ೪೦ ರನ್ ಗಳಿಸಲು ಮಾತ್ರ ಶಕ್ತವಾಯಿತು.
ವಿಜೇತ ಟೀಮ್ ಮ್ಯಾಕ್ಸ್ವೆಲ್ ತಂಡಕ್ಕೆ ದಿ. ಹಂಚಿನಮನೆ ಎಸ್. ಮಹೇಶ್ ಜ್ಞಾಪಕಾರ್ಥ ಟ್ರೋಫಿಯನ್ನು ಪ್ರಾಯೋಜಕರಾದ ಹಂಚಿನಮನೆ ತಂಡದ ನಾಯಕ ಮಾದಾಪುರದ ಸಂತೋಷ್ ಬಾರಿಸಿದ ಸಿಕ್ಸರ್‌ಗಳಿಂದ ವೈಯಕ್ತಿಕವಾಗಿ ೬೫ ರನ್ ತಂಡಕ್ಕೆ ಒದಗಿಸಿ ಪಂದ್ಯ ಶ್ರೇಷ್ಟ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಎದುರಾಳಿ ಅರಕಲಗೂಡು ವಿಲೇಜ್ ಹಂಟರ್ಸ್ ತಂಡ ನಿಗದಿತ ೬ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ಕೇವಲ ೪೦ ರನ್ ಗಳಿಸಲು ಮಾತ್ರ ಶಕ್ತವಾಯಿತು.
ವಿಜೇತ ಟೀಮ್ ಮ್ಯಾಕ್ಸ್ವೆಲ್ ತಂಡಕ್ಕೆ ದಿ. ಹಂಚಿನಮನೆ ಎಸ್. ಮಹೇಶ್ ಜ್ಞಾಪಕಾರ್ಥ ಟ್ರೋಫಿಯನ್ನು ಪ್ರಾಯೋಜಕರಾದ ಹಂಚಿನಮನೆ ದಾನಿ ಜೀವನ್ ನಾಯಕ್ ಬಹುಮಾನ ವಿತರಿಸಿದರು.
ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ರನ್ನರ್ಸ್ ಅರಕಲಗೂಡು ತಂಡದ ನಂಜಪ್ಪ, ಆಲ್‌ರೌಂಡರ್ ಪ್ರಶಸ್ತಿ ಅರಕಲ ಗೋಡು ಭರತ್, ಉತ್ತಮ ದಾಂಡಿಗ ಪ್ರಶಸ್ತಿ ಅರಕಲಗೋಡು ರಘು, ಅತ್ಯುತ್ತಮ ಕ್ಯಾಚ್ ಪ್ರಶಸ್ತಿ ಅರಕಲಗೂಡು ಲೋಕೇಶ್, ಅತ್ಯುತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಲೋಹಿತ್ ಕ್ರಿಕೆಟರ್ಸ್ನ ಕುಟ್ಟಿ ಹಾಗೂ ಉದಯೋನ್ಮುಖ ತಂಡ ಪ್ರಶಸ್ತಿಯನ್ನು ಬ್ಲಾಕ್ ಸಿಟಿ ವಾಲ್ನೂರು ತಂಡಕ್ಕೆ ನೀಡಲಾಯಿತು.
ದೊಡ್ಡಮನೆ ಜಿ. ಭವಿನ್, ವೀರಾಜಪೇಟೆ ತಾಲೂಕು ವಕ್ಕಲಿಗರ ಯುವ ವೇದಿಕೆ ಮಾಜಿ ಅಧ್ಯಕ್ಷ ವಿ.ಎನ್. ಮಹೇಶ್, ಫೈನಾನ್ಸ್ ಕಂಪನಿಯ ವಿ.ಜೆ. ದಿನೇಶ್, ವಿ.ಕೆ. ಮಣಿ, ಜೀವನ್ ನಾಯಕ್ ಮುಂತಾದವರು ಪಾಲ್ಗೊಂಡಿದ್ದರು. ವೀಕ್ಷಕ ವಿವರಣೆಯನ್ನು ಮಹೇಶ್ ಮತ್ತು ನವೀನ್ ಕಿರುಗೂರು ನೀಡಿದರು. ವಿ.ಸಿ. ಸುದೀಪ್ ಸ್ವಾಗತ ಮತ್ತು ವಂದನಾರ್ಪಣೆ ನಿರ್ವಹಿಸಿದರು. ಅಭಿ, ಚಿದು, ಸುಬ್ಬಯ್ಯ, ಅಲೋಕ್ ಮುಂತಾದವರ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ ಶಿಸ್ತುಬದ್ಧವಾಗಿ ಜರುಗಿತು.