ಗೋಣಿಕೊಪ್ಪ ವರದಿ, ಜ. ೧೭: ಭದ್ರಗೋಳ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಕಾಫಿ ಬೆಳೆಗಾರ ಸಣ್ಣುವಂಡ ಸಂಜು ಮಂದಣ್ಣ ಅವರಿಗೆ ಸೇರಿರುವ ಕಾಫಿ ತೋಟವನ್ನು ಹಾನಿ ಮಾಡಿವೆ.

ಶನಿವಾರ ರಾತ್ರಿ ಎರಡು ಆನೆಗಳು ತೋಟಕ್ಕೆ ನುಗ್ಗಿ ಸುಮಾರು ೨೦ಕ್ಕೂ ಕಾಫಿ ಗಿಡಗಳನ್ನು ಮುರಿದು ಹಾಕಿವೆ. ಕಾಫಿ ಬೀಜವನ್ನು ಗಿಡದಿಂದ ಸೊಂಡಿಲಿನಿAದ ಕಿತ್ತು ಹಾಕುವಾಗ ಸಾಕಷ್ಟು ಪ್ರಮಾಣದ ಕಾಫಿ ಬೀಜ ನೆಲ ಕಚ್ಚಿವೆ. ಇದರಿಂದ ಸುಮಾರು ೧೫ ಸಾವಿರಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಅರಣ್ಯ ಇಲಾಖೆಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಂಜು ಮಂದಣ್ಣ ತಿಳಿಸಿದ್ದಾರೆ.