ವೀರಾಜಪೇಟೆ, ಜ. ೧೮: ವೀರಾಜಪೇಟೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಹಾಗೂ ಅನೇಕ ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಶಟಲ್ ಬ್ಯಾಡ್ ಮಿಂಟನ್ ಒಳಾಂಗಣ ಕ್ರೀಡಾಂಗಣ ಉಳ್ಳವರ ಕೈಯಲ್ಲಿದ್ದು, ಸದಸ್ಯತ್ವಕ್ಕೆ ಐದು ಸಾವಿರ ಎನ್ನುವುದು ಸೂಕ್ತವಲ್ಲ. ಅನೇಕ ಬಡ ಕೀಡಾ ಪ್ರತಿಭೆಗಳಿಗೆ ಇದರಿಂದ ಕ್ರೀಡೆಯ ಅವಕಾಶ ತಪ್ಪುವ ಸಾಧ್ಯತೆ ಇದೆ. ಹಾಗಾಗಿ ಪಟ್ಟಣ ಪಂಚಾಯಿತಿ ಇದನ್ನು ವಹಿಸಿಕೊಂಡು ಈಗಿರುವ ಆಡಳಿತ ಮಂಡಳಿಯನ್ನೇ ಇದರ ಆಡಳಿತ ವ್ಯವಸ್ಥೆಗೆ ನಿರ್ವಹಿಸಲು ನಿಯುಕ್ತಿ ಮಾಡಲು ಹಾಗೂ ಕಾಮಗಾರಿ ತುರ್ತಾಗಿ ಮುಗಿಸಲು ಪಟ್ಟಣ ಪಂಚಾಯಿತಿ ಸಾಮಾನ್ಯ ನಿಧಿಯಿಂದ ಹಣ ನೀಡುವಂತೆ ಸಭೆ ತೀರ್ಮಾನಿಸಿತು.
ಪುರಭವನದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ತುರ್ತು ಸಭೆಯಲ್ಲಿ ಪಂಚಾಯಿತಿಯ ಬಹತೇಕ ಸದಸ್ಯರುಗಳು ಒಳ ಕ್ರೀಡಾಂಗಣದ ನಿರ್ವಹಣೆಗೆ ಸಂಬAಧಿಸಿದAತೆ ಚರ್ಚಿಸಿ ಅಂತಿಮವಾಗಿ ಈ ನಿರ್ಣಯ ಅಂಗೀಕರಿಸಲಾಯಿತು.
ಸದಸ್ಯ ಮಹಮ್ಮದ್ ರಾಫಿ ಸಂಬAಧಿಸಿದ ಕ್ರೀಡಾ ಇಲಾಖೆಗೆ ಪತ್ರ ಬರೆದು ಜೂನಿಯರ್ ಕಾಲೇಜಿನ ಬಳಿಯಲ್ಲಿ ಅಪೂರ್ಣವಾಗಿರುವ ಒಳಾಂಗಣ ಕ್ರೀಡಾಂಗಣವನ್ನು ಪಟ್ಟಣ ಪಂಚಾಯಿತಿಗೆ ನಿರ್ವಹಣೆಗೆ ವಹಿಸುವಂತೆ ಕೋರುವ, ಈ ಮೂಲಕ ಉಳ್ಳವರು ಇದರ ಉಸ್ತುವಾರಿಗಳಾಗಿ ೫ - ೧೦ ಸಾವಿರ ಶುಲ್ಕ ನಿಗದಿ ಮಾಡಿ ಬಡ ಕ್ರೀಡಾ ಪ್ರತಿಭೆಗಳನ್ನು ವಂಚಿಸುವುದು ಬೇಡ ಎಂದರು.
ಮುಖ್ಯಾಧಿಕಾರಿ ಶ್ರೀಧರ್ ಈ ಹಿಂದೆ ಜಿಲ್ಲಾಧಿಕಾರಿಗಳು ಇದರ ಗುತ್ತಿಗೆದಾರ ಕಾಮಗಾರಿ ಸೂಕ್ತವಾಗಿ ಪೂರ್ಣಗೊಳಿಸದ ಕಾರಣ ಅಧಿಕಾರಿಗಳ ಸಮಿತಿಯನ್ನು ರಚಿಸಿ ಇದನ್ನು ಸಮಿತಿಗೆ ವಹಿಸಿದ್ದಾರೆ. ಇದರ ಬೀಗದ ಕೈ ನಮ್ಮ ಬಳಿ ಇದೆ. ಅದನ್ನು ಸದಸ್ಯರ ಆಶಯದಂತೆ ಪಟ್ಟಣ ಪಂಚಾಯಿತಿಯಿAದಲೇ ನಿರ್ವಹಿಸುವ ತೀರ್ಮಾನಕ್ಕೆ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಗಾಂಧಿನಗರದಲ್ಲಿ ಹೊಸ ಮಾಂಸದAಗಡಿ ಆರಂಭಗೊAಡಿದೆ. ಆದರೆ ಇದಕ್ಕೆ ಪರವಾನಗಿ ಇಲ್ಲ ಎಂದು ಸದಸ್ಯೆ ಜೂನ ಆರೋಪಿಸಿದರು. ಮಾಂಸದ ಅಂಗಡಿ ಆರಂಭಿಸುವ ಕುರಿತು ಸ್ಥಳೀಯ ಸದಸ್ಯರ ಗಮನಕ್ಕೆ ತಂದಿಲ್ಲ. ಇದು ಸದಸ್ಯರ ಗೌರವಕ್ಕೆ ಚ್ಯುತಿ ತರುತ್ತದೆ ಎಂದು ಆರೋಪಿಸಿದಾಗ ಮುಖ್ಯಾಧಿಕಾರಿ ಶ್ರೀಧರ್ ಪರವಾನಗಿ ಇಲ್ಲದ ಅಂಗಡಿಯನ್ನು ಮುಚ್ಚಿಸುವುದಾಗಿ ತಿಳಿಸಿದರು. ಕೋಳಿ, ಮಾಂಸ ಅಂಗಡಿಗಳಿಗೆ ಪರವಾನಗಿ ನೀಡುವಾಗ ಆ ವ್ಯಾಪ್ತಿಯ ಸದಸ್ಯರುಗಳ ಗಮನಕ್ಕೆ ಖುದ್ದು ತರಬೇಕು. ಅವರ ಪರಿಶೀಲನೆ, ಸಮ್ಮತಿಯನ್ನು ಪಡೆಯುವುದು ವಾಡಿಕೆಯಾಗಲಿ ಎಂದು ಆಗ್ರಹಿಸಿದರು.
ಸಭೆಯಲ್ಲಿ ಬೀದಿ ದೀಪ ನಿರ್ವಹಣೆಯ ವಾರ್ಷಿಕ ಗುತ್ತಿಗೆಯ ಟೆಂಡರ್ ಅನುಮೋದನೆ, ೧೩ ನೇ ಹಣಕಾಸಿನ ಕುಡಿಯುವ ನೀರಿನ ನಿರ್ವಹಣೆಯ ಕಾಮಗಾರಿ ಟೆಂಡರ್ ಅನುಮೋದನೆ ಹಾಗೂ ಮಾಂಸ ಮಾರುಕಟ್ಟೆಯ ಜಂಕ್ಷನ್ ಬಳಿಯಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಸಭೆ ಸಮ್ಮತಿ ನೀಡಿತು. ಪಟ್ಟಣ ಪಂಚಾಯಿತಿಗಳ ಟೆಂಡರ್‌ಗೆ ಸಂಬAಧಿಸಿದAತೆ ಅಭಿಯಂತರ ಎಂ.ಎನ್. ಹೇಮ್‌ಕುಮಾರ್ ಸಭೆಗೆ ವಿವರವಾದ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಹರ್ಷವರ್ಧನ್ ಉಪಸ್ಥಿತರಿದ್ದರು.