ಮಡಿಕೇರಿ, ಜ. ೧೭: ರೆಸಾರ್ಟ್ವೊಂದರ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ತೆರೆದು ಹಲವಾರು ಮಂದಿಗೆ ಉದ್ಯೋಗ ಕೊಡಿಸುವದಾಗಿ ಹಣ ಪಡೆದು ವಂಚಿಸಿರುವ ಆರೋಪಿಯೋರ್ವನನ್ನು ಸೈಬರ್ ಕ್ರೆöÊಂ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಇಬ್ನಿ ರೆಸಾರ್ಟ್ನ ಇ-ಮೇಲ್ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆಯೊಂದನ್ನು (ಮೊದಲ ಪುಟದಿಂದ) ತೆರೆದು ಕೊಡಗು, ಮೈಸೂರು, ಪಿರಿಯಾಪಟ್ಟಣದ ಸುಮಾರು ಹತ್ತು ಮಂದಿಯಿAದ ಹಣ ಪಡೆದು ಇಬ್ನಿ ರೆಸಾರ್ಟ್ನಲ್ಲಿ ಉದ್ಯೋಗ ಕೊಡಿಸುವದಾಗಿ ನಂಬಿಸಿ ಬಳಿಕ ವಂಚಿಸಿರುವ ಬಗ್ಗೆ ಇಬ್ನಿ ರೆಸಾರ್ಟ್ನವರು ನೀಡಿದ ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ಪ್ರಕರಣದ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟ ಗ್ರಾಮದ ಮಂಜುನಾಥ್ ನಾರಾಯಣ ನಾಯಕ್ ಎಂಬಾತನನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಬAಧಿತ ಆರೋಪಿ ಮಡಿಕೇರಿ ನಗರದ ಸ್ನೇಹಿತೆಯೊಬ್ಬಳ ಮನೆಯಲ್ಲಿ ನೆಲೆಸಿ ಈ ಕೃತ್ಯವೆಸಗಿರುವದಾಗಿ ವಿಚಾರಣೆ ವೇಳೆ ತಿಳಿದು ಬಂದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಇಂತಹ ಸಾಕಷ್ಟು ಪ್ರಕರಣಗಳು ನಡೆಯುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಎಸ್‌ಪಿ ಕ್ಷಮಾ ಮಿಶ್ರಾ ನಿರ್ದೇಶನದಂತೆ ಸೈಬರ್ ಕ್ರೆöÊಂ ವಿಭಾಗದ ನಿರೀಕ್ಷಕ ಎಂ.ಎ. ಹರೀಶ್‌ಕುಮಾರ್, ಮುಖ್ಯ ಪೇದೆಗಳಾದ ಪ್ರಕಾಶ್, ಎಂ.ಪಿ. ಕಾರ್ಯಪ್ಪ, ಪಿ.ಸಿ. ಪ್ರಕಾಶ್, ದೀಪಕ್, ಮಂಜುನಾಥ್, ಮಹಿಳಾ ಸಿಬ್ಬಂದಿ ದೇವಿ ಪ್ರಸಾದಿನಿ, ಚಾಲಕ ರಾಜೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.