ಮಡಿಕೇರಿ, ೧೭: ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮಂಗಳೂರು-ಮಡಿಕೇರಿ ಹೆದ್ದಾರಿ ಮಧ್ಯೆಯ ತಾಳತ್‌ಮನೆಯಲ್ಲಿ ನಡೆದಿದೆ.
೨ನೇ ಮೊಣ್ಣಂಗೇರಿಯ ಕೀರ್ತನ್ (೨೦) ಮೃತ ದುರ್ದೈವಿ. ನಗರದ ಮೊಬೈಲ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿರುವ ಕೀರ್ತನ್ ಬೆಳಗ್ಗೆ ೮.೪೫ರ ಸುಮಾರಿಗೆ ಮನೆಯಿಂದ ಮಡಿಕೇರಿ ನಗರಕ್ಕೆ ಬರುತ್ತಿದ್ದಾಗ ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಎದೆ ಹಾಗೂ ತಲೆಭಾಗಕ್ಕೆ ಗಂಭೀರ ಗಾಯಗೊಂಡ ಸವಾರನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನಲ್ಲಿ ಯುವಕ ಮೃತಪಟ್ಟಿದ್ದಾನೆ.